ಆಟವಾಡುತ್ತಿರುವ ವೇಳೆ ಮ್ಯಾನ್‌ಹೋಲ್‌ಗೆ ಬಿದ್ದು ಬಾಲಕ ಸಾವು

ಗುರುಗ್ರಾಮ್: ಎರಡು ವರ್ಷದ ಬಾಲಕ ಮ್ಯಾನ್‌ಹೋಲ್‌ಗೆ ಬಿದ್ದು ಮೃತಪಟ್ಟಿರುವ ಘಟನೆ ಗುರುಗ್ರಾಮದ ಸೆಕ್ಟರ್ 37ರಲ್ಲಿ ನಡೆದಿದೆ.

ಈ ಘಟನೆಗೆ ಪ್ರಾಧಿಕಾರಗಳು ಮ್ಯಾನ್‌ಹೋಲ್ ಅನ್ನು ತೆರೆದ ಸ್ಥಿತಿಯಲ್ಲೇ ಬಿಟ್ಟು ಹೋಗಿರುವುದು ಕಾರಣ ಎಂದು ಮೃತ ಬಾಲಕನ ತಂದೆಯ ಆರೋಪ ಮಾಡಿದ್ದಾರೆ.

ಸಿಹಿ ಗ್ರಾಮದಲ್ಲಿರುವ ತನ್ನ ತಂದೆ ಭಗತ್ ಕುಮಾರ್ ಅವರ ಟೀ ಅಂಗಡಿಯ ಮುಂದೆ ಬಾಲಕ ಪ್ರದೀಪ್ ಕುಮಾರ್ ಆಟವಾಡುವಾಗ ಈ ಘಟನೆ ಜರುಗಿದೆ ಎಂದು ಠಾಣಾಧಿಕಾರಿ ಸತ್ಯವಾನ್ ಮಾಹಿತಿ ನೀಡಿದ್ದಾರೆ.

ನನ್ನ ಪುತ್ರ ಟೀ ಅಂಗಡಿಯೆದುರು ಆಟವಾಡುತ್ತಿದ್ದಾಗ ಮ್ಯಾನ್‌ಹೋಲ್‌ಗೆ ಬಿದ್ದ. ನಾವು ಆತನನ್ನು ಹುಡುಕಾಡಲು ಪ್ರಾರಂಭಿಸಿದಾಗ, ಆತ ಒಳಚರಂಡಿಯಲ್ಲಿ ಬಿದ್ದಿರುವುದು ಕಂಡು ಬಂದಿತು ಎಂದು ಭಗತ್ ಕುಮಾರ್ ತಮ್ಮ ದೂರಿನಲ್ಲಿ ಮಾಹಿತಿ ನೀಡಿದ್ದಾರೆ.

ಭಗತ್ ಕುಮಾರ್ ದೂರನ್ನು ಆಧರಿಸಿ ಎಫ್‌ ಐ ಆರ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ‌.

Font Awesome Icons

Leave a Reply

Your email address will not be published. Required fields are marked *