ಆಫ್ರಿಕಾದ ಮಾರ್ಕೊ ಮರೈಸ್ ಹಾಗು ಮಾಜಿ ನಾಯಕ ರವಿಶಾಸ್ತ್ರಿಯವರ ದಾಖಲೆ ಮುರಿದ ತನ್ಮಯ್

ಹೈದರಾಬಾದ್: ಇಲ್ಲಿ‌ನ ನೆಕ್ಸ್‌ಜೆನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಹೈದರಾಬಾದ್ ಮತ್ತು ಅರುಣಾಚಲ ಪ್ರದೇಶ ತಂಡಗಳು ಮುಖಾಮುಖಿಯಾಗಿವೆ. ಮೊದಲು ಬ್ಯಾಟಿಂಗ್ ಮಾಡಿದ ಅರುಣಾಚಲ ಪ್ರದೇಶ ೧೭೨ ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ.

ಹೈದರಾಬಾದ್ ತಂಡದ ಪರ ಆರಂಭಿಕ ಆಟಗಾರ ತನ್ಮಯ್ ಅಗರ್ವಾಲ್ ಅತಿ ವೇಗದ ತ್ರಿಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಇದರೊಂದಿಗೆ ಅವರು 2017 ರಲ್ಲಿ 191 ಎಸೆತಗಳಲ್ಲಿ 300 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾದ ಮಾರ್ಕೊ ಮರೈಸ್ ಅವರ ದಾಖಲೆಯನ್ನು ಮುರಿದಿದ್ದಾರೆ. ಜೊತೆಗೆ ಕೇವಲ 119 ಎಸೆತಗಳಲ್ಲಿ ದ್ವಿಶತಕ ಪೂರ್ಣಗೊಳಿಸುವ ಮೂಲಕ ಭಾರತದ ಮಾಜಿ ನಾಯಕ ರವಿಶಾಸ್ತ್ರಿ ಅವರ 39 ವರ್ಷಗಳ ಹಿಂದಿನ ಅತಿ ವೇಗದ ದ್ವಿಶತಕದ ದಾಖಲೆಯನ್ನು ಪುಡಿಗಟ್ಟಿದ್ದಾರೆ.

Font Awesome Icons

Leave a Reply

Your email address will not be published. Required fields are marked *