ಬೆಂಗಳೂರು: ಇದೇ ಮಾರ್ಚ್ 22ನೇ ತಾರೀಕು ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ ಮೊದಲ ಐಪಿಎಲ್ ಮ್ಯಾಚ್ ನಡೆಯಲಿದೆ. ಈಗಾಗಲೇ ಆರ್‌ಸಿಬಿ ತಂಡಕ್ಕೆ ಸ್ಟಾರ್ ಕ್ರಿಕೆಟರ್ ರಜತ್ ಪಾಟಿದಾರ್ ಕ್ಯಾಂಪ್ ಸೇರಿಕೊಂಡಿದ್ದಾರೆ.
ರಜತ್ ಇಷ್ಟು ದಿನ ರೆಸ್ಟ್ನಲ್ಲಿದ್ದರು. ಒಂದು ವಾರದ ರೆಸ್ಟ್ ಬಳಿಕ ಈಗ ರಜತ್ ಪಾಟಿದಾರ್ ಆರ್‌ಸಿಬಿ ಕ್ಯಾಂಪ್ ಸೇರಿದ್ದಾರೆ. ಆರ್‌ಸಿಬಿ ತಂಡ ಸೇರಿಕೊಂಡ ರಜತ್ಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.
ಅದು 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಎಲಿಮಿನೇಟರ್ ಪಂದ್ಯ. ಅಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಬ್ಬರಿಸಿದ ಆರ್‌ಸಿಬಿ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ ಆಕರ್ಷಕ ಶತಕ ಸಿಡಿಸಿ ದಾಖಲೆ ಬರೆದಿದ್ದರು.
ಐಪಿಎಲ್ ಪ್ಲೇ ಆಫ್ ಪಂದ್ಯಗಳಲ್ಲಿ ಗರಿಷ್ಠ ರನ್ ಸಿಡಿಸಿದ ಅನ್‌ಕ್ಯಾಪ್ ಪ್ಲೇಯರ್ ಅನ್ನೋ ಹೆಗ್ಗಳಿಕೆಗೆ ರಜತ್ ಪಾಟಿದಾರ್ ಪಾತ್ರರಾಗಿದ್ದಾರೆ.