ಆಲಗೂರ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ವಿಜಯಪುರ: ದೇಶಕ್ಕೆ ಕಾಂಗ್ರೆಸ್ ಮಾತ್ರ ಶಕ್ತಿ ಎಂದು ಲೋಕಸಭೆ ಕಾಂಗ್ರೆಸ್ ಅಭ್ರ‍್ಥಿ ರಾಜು ಆಲಗೂರ ಹೇಳಿದರು.

ಸಿಂದಗಿ ಮತಕ್ಷೇತ್ರದ ತಾಂಬಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ದೇಶವೀಗ ಬದಲಾವಣೆ ಬಯಸಿದೆ. ವಿಜಯಪುರ ಲೋಕಸಭೆ ಕ್ಷೇತ್ರದ ಜನರೂ ಹೊಸ ಬೆಳಕಿನ ನಿರೀಕ್ಷೆಯಲ್ಲಿದ್ದಾರೆ. ತಮಗೆ ಮತ ನೀಡಿ ಆರಿಸಿ ಕಳಿಸಿದ್ದೇ ಆದರೆ, ಜಿಲ್ಲೆ ಹಿಂದೆಂದೂ ಕಂಡರಿಯದ ಅಭಿವೃದ್ಧಿ ಮಾಡಿ ತೋರಿಸುವೆ. ನಿಮ್ಮೆಲ್ಲರ ನಂಬಿಕೆ ಉಳಿಸಿಕೊಳ್ಳುವೆ ಎಂದು ಭರವಸೆ ನೀಡಿದರು.

ಶಾಸಕರಾದ ಅಶೋಕ ಮನಗೂಳಿ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಮಾತ್ರ ಜನ ಹಿತ ಸಾಧ್ಯ. ನೀವು ಕೇಂದ್ರ ಸರಕಾರದಿಂದ ಬರುವ ನಿಮ್ಮ ಹಕ್ಕಿನಿಂದ ವಂಚಿತರಾಗಿದ್ದೀರಿ. ನಿಮ್ಮ ಬದುಕು ಹಸನಾಗಲು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ. ಮೋದಿಯವರು ಭಾವನಾತ್ಮಕ ವಿಷಯ ಕೆದಕಿ ಜನರನ್ನು ಪ್ರಚೋದಿಸುತ್ತಾರೆ. ಫುಲ್ವಾಮಾ, ರಾಮ ಮಂದಿರ ಎನ್ನುತ್ತಾರೆ. ಕಾಂಗ್ರೆಸ್‌ನ ಕೆಲಸಗಳನ್ನು ನೋಡಿ ನೀವು ಮತ ಹಾಕಿ ಎಂದು ಮನವಿ ಮಾಡಿದರು.

ಮುಖಂಡರಾದ ಎಸ್.ಎಂ. ಪಾಟೀಲ ಗಣಿಹಾರ, ಜಿ.ಪಂ. ಸದಸ್ಯ ಗುರಣ್ಣಗೌಡ ಪಾಟೀಲ ಚಾಂದಕವಟೆ, ರವಿ ಚವ್ಹಾಣ, ಇಲಿಯಾಸ್ ಬೋರಾಮಣಿ, ಗಂಗಾಧರ ಸಂಬಣ್ಣಿ, ಕಾಮೇಶ ಉಕ್ಕಲಿ, ದೊಡ್ಡಮನಿ, ಅಧ್ಯಕ್ಷ ರಜಾಕ್, ಮಶಾಕ್ ಕಾಳೆ, ಫಾರೂಕ್ ಮುಲ್ಲಾ, ಮಹ್ಮದ ಉಜನಿ ಇತರರು ಇದ್ದರು.

 

Font Awesome Icons

Leave a Reply

Your email address will not be published. Required fields are marked *