ಇಂದು ಜನ್ಮದಿನ ಸಂಭ್ರಮದಲ್ಲಿ ಮಹೇಶ್ ಬಾಬು

ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬುಗೆ ಇಂದು 48 ನೇ ಜನ್ಮದಿನ. ವಯಸ್ಸಾಗುತ್ತಿದ್ದರೂ ಹ್ಯಾಂಡ್ಸಮ್ ಹಂಕ್ ಆಗಿಯೇ ಉಳಿದುಕೊಂಡಿರುವ ಮಹೇಶ್ ಬಾಬು ಈ ಬಾರಿ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಪ್ರತೀ ಬಾರಿ ಅವರ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾಗಳ ಬಗ್ಗೆ ಭರ್ಜರಿ ಅಪ್ ಡೇಟ್ ಸಿಗುತ್ತಿತ್ತು.  ಆದರೆ ಈ ಬಾರಿ ಫ್ಯಾನ್ಸ್ ಗೆ ದೊಡ್ಡ ಅಪ್ ಡೇಟ್ ಏನೂ ಸಿಗದು. ಈ ಬಾರಿ ರಾಜಮೌಳಿ ಜೊತೆ ಹೊಸ ಸಿನಿಮಾದ ಬಗ್ಗೆ ಅಪ್ ಡೇಟ್ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಅದು ಸುಳ್ಳಾಗಿದೆ. ಆದರೆ ಗುಂಟೂರು ಖಾರಂ ಸಿನಿಮಾ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಸಾ‍ಧ್ಯತೆಯಿದೆ.

ತೆಲುಗು ಚಿತ್ರರಂಗದಲ್ಲಿ ಪ್ರಿನ್ಸ್ ಎಂದೇ ಕರೆಯಿಸಿಕೊಳ್ಳುವ ಮಹೇಶ್ ಬಾಬು, ಟಾಲಿವುಡ್ ಸೂಪರ್ ಸ್ಟಾರ್ ಕೃಷ್ಣರವರ ಪುತ್ರ. ನಾಯಕನಾಗಿ ಮಾತ್ರವಲ್ಲದೇ, ನಿರ್ಮಾಪಕರಾಗಿ ಕೂಡ ಗುರುತಿಸಿಕೊಂಡಿದ್ದಾರೆ. 1975 ರಲ್ಲಿ ಚೆನ್ನೈನಲ್ಲಿ ಜನಿಸಿದರು. ತಂದೆ ತೆಲಗು ಚಿತ್ರರಂಗದಲ್ಲಿ ದೊಡ್ಡ ನಟನಾಗಿದ್ದರಿಂದ, ಬಾಲ ನಟನಾಗಿ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *