ಇಂದು ಬಹುನಿರೀಕ್ಷಿತ ಕುಸ್ತಿ ಫೆಡರೇಷನ್ ಚುನಾವಣೆ

ನವದೆಹಲಿ: ಹಲವು ಬಾರಿ ಮುಂದೂಡಿಕೆಯಾಗಿರುವ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ)ನ ಬಹುನಿರೀಕ್ಷಿತ ಚುನಾವಣೆ ಗುರುವಾರ ನಡೆಯಲಿದೆ. ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಆಪ್ತರು ಕಣದಲ್ಲಿದ್ದು, ಎಲ್ಲಾ ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಬ್ರಿಜ್ ಆಪ್ತ, ಉತ್ತರ ಪ್ರದೇಶ ಕುಸ್ತಿ ಸಂಸ್ಥೆ ಅಧ್ಯಕ್ಷ ಸಂಜಯ್ ಸಿಂಗ್ ಹಾಗೂ ಕುಸ್ತಿಪಟುಗಳ ಬೆಂಬಲಿತ, 2010ರ ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತೆ ಅನಿತಾ ಶೊರೇನ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಅಧ್ಯಕ್ಷ ಸ್ಥಾನದ ಜೊತೆಗೆ 1 ಹಿರಿಯ ಉಪಾಧ್ಯಕ್ಷ, 4 ಉಪಾಧ್ಯಕ್ಷ, 1 ಕಾರ್ಯದರ್ಶಿ, 1 ಖಜಾಂಚಿ, 2 ಜೊತೆ ಕಾರ್ಯದರ್ಶಿ ಹಾಗೂ 5 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಎಲ್ಲಾ ರಾಜ್ಯಗಳ ಸಮಿತಿಗಳಿಂದ ತಲಾ ಇಬ್ಬರು ಮತ ಚಲಾಯಿಸಲಿದ್ದಾರೆ. ಒಲಿಂಪಿಕ್ಸ್ ಭವನದಲ್ಲಿ ಚುನಾವಣೆ ನಿಗದಿಯಾಗಿದ್ದು, ಸಂಜೆ ವೇಳೆ ಫಲಿತಾಂಶ ಪ್ರಕಟವಾಗಲಿದೆ.

ಈ ಮೊದಲು ಜುಲೈನಲ್ಲಿ ಡಬ್ಲ್ಯುಎಫ್‌ಐಗೆ ಮೊದಲ ಬಾರಿ ಚುನಾವಣೆ ನಿಗದಿಯಾಗಿತ್ತು. ಆ ಬಳಿಕ ಮತ್ತೆರಡು ಬಾರಿ ಚುನಾವಣೆ ಮುಂದೂಡಿಕೆಯಾಗಿದ್ದು, ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಚುನಾವಣೆ ನಡೆಸಲು ಸೂಚಿಸಿತ್ತು.

Font Awesome Icons

Leave a Reply

Your email address will not be published. Required fields are marked *