ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಇಂದು ತಮ್ಮ 32ನೇ ಹುಟ್ಟುಹಬ್ಬವನ್ನು ತಮ್ಮ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. 2003 ರಲ್ಲಿ ತೆರೆಕಂಡ ‘ಹವಾ’ ಹಾಗೂ ‘ಕೊಯಿ ಮಿಲ್ ಗಯಾ’ ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ ಅಭಿನಯಿಸುವ ಮೂಲಕ ಸಿನಿಮಾರಂಗಕ್ಕೆ ಅವರು ಪಾದಾರ್ಪಣೆ ಮಾಡಿದ್ದರು.
ಬಾಲ ನಟಿಯಾಗಿ ಸಾಕಷ್ಟು ಹೆಸರು ಮಾಡಿದ್ದ ಹನ್ಸಿಕಾ 2007 ರಲ್ಲಿ ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ‘ದೇಶಮುದುರು’ಸಿನಿಮಾದಲ್ಲಿ ಮೊದಲ ಬಾರಿ ನಾಯಕಿಯಾಗಿ ಅಭಿನಯಿಸಿದರು.
2008ರಲ್ಲಿ ಬಿಡುಗಡೆಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ʼಬಿಂದಾಸ್ʼ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ಗೂ ಪ್ರವೇಶಿಸಿದರು. ನಂತರ ತೆಲುಗು ಹಾಗು ತಮಿಳು ಚಿತ್ರರಂಗದ ಬೇಡಿಕೆ ನಟಿಯಾಗಿ ಹೊರಹೊಮ್ಮಿದರು. ಬಾಲನಟಿಯಾಗಿ ವೃತ್ತಿಜೀವನವನ್ನು ಆರಂಭಿಸಿದ್ದ ನಟಿ ಹನ್ಸಿಕಾ ಮೋಟ್ವಾನಿ ತಮಿಳು ಮತ್ತು ತೆಲುಗಿನಲ್ಲಿ ಹಲವಾರು ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ಹನ್ಸಿಕಾ ಮೋಟ್ವಾನಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಹು ಕಾಲದ ಗೆಳೆಯ, ಉದ್ಯಮಿಯಾಗಿರೋ ಸೊಹೈಲ್ ಖತುರಿಯಾ ಅವರೊಂದಿಗೆ ವಿವಾಹ ಬಂಧನಕ್ಕೆ ಒಳಾಗಿದ್ದರು.