ಇದು ಪ್ರೇಮ ಕಥೆಯಲ್ಲ: ಎಮೋಷನ್ಸ್ ತುಂಬಿರುವ ಎಲ್ಲರಿಗೂ ಕನೆಕ್ಟ್ ಆಗುವ ಚಿತ್ರ ‘ಮೇಘ’ – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

ಬೆಂಗಳೂರು,ಜನವರಿ,8,2024(www.justkannada.in): ಮೋಡಗಳನ್ನ ನೋಡೋದೇ ಚೆಂದ… ಮಳೆ ಬಂದರೆ, ಮನದ ನೋವು ತೊಯ್ದಷ್ಟೇ ಸಂತಸ. ಆ ಮೋಡಗಳ ಮೇಲೊಂದು ಸಿನಿಮಾ ಸಿದ್ದವಾಗಿದೆ. ಎಮೋಷನ್ಸ್ ತುಂಬಿರುವ ಎಲ್ಲರಿಗೂ ಕನೆಕ್ಟ್ ಆಗುವ ಸಿನಿಮಾ ‘ಮೇಘ’. ಈ ಸಿನಿಮಾದಲ್ಲಿ ‘ಕನ್ನಡತಿ’ ಖ್ಯಾತಿಯ ಕಿರಣ್ ರಾಜ್ ನಾಯಕ ನಟರಾಗಿದ್ದಾರೆ.

ಮನಸ್ಸಿನಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಬೇಕೆಂಬ ಆಸೆಯಿತ್ತು.  ಕೋವಿಡ್ ಎಂಬುದು ಇವರನ್ನು ಮತ್ತೆ ಚಿತ್ರರಂಗದತ್ತ ಸೆಳೆಯುವಂತೆ ಮಾಡಿತ್ತು. ಅಲ್ಲಿಂದ ವಿ.ನಾಗೇಂದ್ರ ಪ್ರಸಾದ್ ಅವರ ಬಳಿ ಕೆಲಸ ಶುರು ಮಾಡಿದರು. ಬಳಿಕ ಸ್ವಂತ ಏನಾದರೂ ಮಾಡಬೇಕೆಂಬ ಹಠದಿಂದ ನಿರ್ದೇಶನಕ್ಕೆ ಇಳಿದೆ ಬಿಟ್ಟರು. ಅದರ ಭಾಗಿಯಾಗಿತಯಾರಾಗಿರುವುದು ‘ಮೇಘ’ ಸಿನಿಮಾ. ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿರುವ ಚರಣ್, ಹೊಸತಾಗಿ ಸಾಕಷ್ಟು ಕಲಿತಿದ್ದಾರೆ. ಮೇಘ ಎಂದರೆ ಫೀಲಿಂಗ್ಸ್. ಮೋಡಗಳನ್ನು ಫೀಲಿಂಗ್ಸ್ ಗೆ ಹೋಲಿಕೆ ಮಾಡಲಾಗಿದೆ. ಅದು ಒಂದು ಕಡೆ ನಿಲ್ಲುವುದಿಲ್ಲ, ಅದಕ್ಕೊಂದು ಆಕಾರವೂ ಇಲ್ಲ. ಅದನ್ನು ನಂಬಿ ಗೊಂದಲ ಆಗುತ್ತಾರೆ. ನಿಜವಾದ ಪ್ರೀತಿ ಅಂದರೆ ಏನು ಅಂತ ಅಪ್ಪ ಮಗನಿಗೆ ನಿರ್ದೇಶನ ಹೇಳುತ್ತಾ ಹೋಗುತ್ತಾರೆ. ಫ್ರೆಂಡ್ ಶಿಫ್ ಆದ ಕೂಡಲೇ ಲವ್ ಆಗುವುದಿಲ್ಲ. ಈ ಸಿನಿಮಾ ತಂದೆ ಮಗನ ಬಾಂಧವ್ಯದ ಮೇಲೆ ಸಾಗುತ್ತದೆ ಎಂದು ತಮ್ಮ ನಿರ್ದೇಶನದ ಅನುಭವ ಬಿಚ್ಚಿಟ್ಟಿದ್ದಾರೆ.

ಕೃಷಿ  ಪ್ರೊಡಕ್ಷನ್ಸ್ ಮೂಲಕ ಯತೀಶ್ ಹೆಚ್.ಆರ್ ಬಂಡವಾಳ ಹೂಡಿದ್ದಾರೆ. ಚರಣ್, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ನಾಯಕನಾಗಿ ಕಿರಣ್ ರಾಜ್, ನಾಯಕಿಯಾಗಿ ಕಾಜಲ್ ಕುಂದರ್, ಇನ್ನುಳಿದಂತೆ ರಾಜೇಶ್ ನಟರಂಗ, ಶೋಭ್ರಾಜ್, ಸುಂದರ್, ತರಂಗ ವಿಶ್ವ, ಹನುಮಂತೇಗೌಡ, ನಾಗೇಂದ್ರ ಷ, ರಾಜಾಹುಲಿ ಗಿರೀಶ್, ನಾಗಮಂಗಲ ಜಯರಾಮ್, ಸಂಗೀತ, ಹಂಸ, ಸೌರಭ ಕುಲಕರ್ಣಿ, ನಟಿಸಿದ್ದಾರೆ. ಗೌತಮ್ ನಾಯಕ್ ಇವರ ಸಿನಿಮಾಟೋಗ್ರಫಿ ಹಾಗು ಸಂಕಲನ, ಜೋಯೆಲ್ ಸಕಾರಿ ಅವರ ಸಂಗೀತ ನಿರ್ದೇಶನ ಈ ಸಿನೆಮಾಕ್ಕಿದೆ. ಚಿಕ್ಕಮಗಳೂರು, ಬೆಂಗಳೂರು, ಮೈಸೂರು ತೀರ್ಥಹಳ್ಳಿ ಮಲ್ಪೆ ಸೇರಿದಂತೆ ಹಲವೆಡೆ ಶೂಟಿಂಗ್ ಆಗಿದೆ. ವಿ. ನಾಗೇಂದ್ರ ಪ್ರಸಾದ್ ಹಾಗೂ ಚರಣ್ ರವರ ಸಾಹಿತ್ಯ ಈ ಚಿತ್ರಕ್ಕಿದೆ. ಚಿತ್ರರಂಗದವರಿಂದ ‘ಮೇಘ’ ಚಿತ್ರದ ಟೈಟಲ್ ಟೀಸರ್ ಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ದೊರಕಿದೆ.

ಈ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ನಿರ್ಮಾಪಕರಾಗಿಎಂಟ್ರಿ ಕೊಟ್ಟಿರುವ ಯತೀಶ್ ಎಚ್ ಆರ್, ಲವ್ ಅಂತ ಹೇಳಿದರೆ ಬರಿ ಹುಡುಗ ಹುಡುಗಿಯದ್ದೇ ಅಲ್ಲ, ಅಪ್ಪ ಮಗನದ್ದುಇರುತ್ತದೆ, ಸ್ನೇಹಿತರದ್ದುಇರುತ್ತದೆ. ಈ ಸಿನಿಮಾ, ನೋಡುವಾಗ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತಾ ಸಾಗುತ್ತದೆ. ಡಿಫರೆಂಟ್  ಜನರಲ್ ನಲ್ಲಿ ನಮ್ಮ ಸಿನೆಮಾವನ್ನು ಜನ ಎಂಜಾಯ್ ಮಾಡುತ್ತಾರೆ ಎಂದಿದ್ದಾರೆ.

‘ಪ್ರೀತಿ ಎಂದಿಗೂ ಸ್ವಾವಲಂಬಿಯಲ್ಲ. ಅದು ಬಳ್ಳಿಯ ಹಾಗೆ ಬೆಳೆಯಲು ಯಾವುದಾದರೂ ಗಟ್ಟಿಬಾಂಧವ್ಯದ ಆಸರೆಬೇಕು.’

ನಿರ್ದೇಶಕ, ಚರಣ್.

Key words: not – love story- ‘Megha-emotional- film

 

Font Awesome Icons

Leave a Reply

Your email address will not be published. Required fields are marked *