ನ್ಯೂಯಾರ್ಕ್ : ಅಮೇರಿಕಾ ಇದುವರೆಗೂ ಸಾಲು ಸಾಲಾಗಿ 6 ಮಂದಿ ಭಾರತೀಯರನ್ನು ಬಲಿ ಪಡೆದಿದ್ದು ಇದೀಗ 7ನೇಯದಾಗಿ ಮತ್ತೋರ್ವ ವಿದ್ಯಾರ್ಥಿಯನ್ನು ಇತ್ತೀಚೆಗೆ ಬಲಿ ಪಡೆದಿದೆ.
ಅಮೆರಿಕದ ಓಹಿಯೋ ರಾಜ್ಯದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಮೃತಪಟ್ಟಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಇಲ್ಲಿನ ಭಾರತದ ರಾಯಭಾರ ಕಚೇರಿ ತಿಳಿಸಿದೆ.ಉಮಾ ಸತ್ಯ ಸಾಯಿ ಗಡ್ಡೆ ಮೃತ ವಿದ್ಯಾರ್ಥಿ.
ಸಾಯಿ ಗಡ್ಡೆ ಅವರ ಸಾವಿನಿಂದಾಗಿ “ತೀವ್ರ ದುಃಖವಾಗಿದೆ” ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಶುಕ್ರವಾರ ಹೇಳಿದ್ದಾರೆ.ಸಾವಿನ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ. ಇದು ಭಾರತದಲ್ಲಿನ ಕುಟುಂಬದೊಂದಿಗೆ ಸಂಪರ್ಕವನ್ನು ಮುಂದುವರೆಸಿದೆ ಎಂದು ಕಾನ್ಸುಲೇಟ್ ತಿಳಿಸಿದೆ.
ಅಲ್ಲದೇ, ಉಮಾ ಗಡ್ಡೆ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಶೀಘ್ರವಾಗಿ ಸಾಗಿಸುವುದರ ಜೊತೆಗೆ ಬೇರೆ ಎಲ್ಲ ಸಹಾಯವನ್ನು ಮಾಡಲಾಗುತ್ತಿದೆ ಎಂದು ಕಾನ್ಸುಲೇಟ್ ಟ್ವೀಟ್ ಮೂಲಕ ತಿಳಿಸಿದೆ.