ಲಖನೌ: ಇನ್ನೊಂದು ಪುಲ್ವಾಮಾ ದಾಳಿ ನಡೆಯಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಮುಸ್ಲಿಂ ವಿದ್ಯಾರ್ಥಿಯೋರ್ವ ಈಗ ಕಂಬಿ ಹಿಂದೆ ಕೂತಿದ್ದಾನೆ.
ವಿದ್ಯಾರ್ಥಿ ಮಾಡಿದ ಈ ಪೋಸ್ಟ್ ಸ್ವಲ್ಪ ಹೊತ್ತಿನಲ್ಲೇ ವೈರಲ್ ಆಗಿದ್ದು, ಕೂಡಲೇ ದಿಯೋಬಂದ್ ಪೊಲೀಸರು ವಿದ್ಯಾರ್ಥಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಮೊಹಮ್ಮದ್ ತಲ್ಹಾ ಮಝರ್ ಬಂದಿತ ವಿದ್ಯಾರ್ಥಿ.
ಈತ ಜಾರ್ಖಂಡ್‌ನ ಜೆಮ್ಶೆಡ್‌ಪುರದ ಸೆರೈಕೆಲಾ ನಿವಾಸಿಯಾಗಿದ್ದು, ದಿಯೋಬಂದ್‌ನ ದಾರುಲ್ ಉಲೂಮ್ ಮದ್ರಾಸಾದಲ್ಲಿ ಅಧ್ಯಯನ ನಡೆಸುತ್ತಿದ್ದ. ಈತ ತನ್ನ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ‘ಬಹುತ್ ಜಲ್ದಿ ಇನ್ ಶ ಅಲ್ಲಾ ದುಸ್ರಾ ಪುಲ್ವಾಮ ಬೀ ಹೋಗ’ ಎಂದು ಬರೆದುಕೊಂಡಿದ್ದಾ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ಹಾಗೂ ಭಯೋತ್ಪಾದನ ನಿಗ್ರಹ ದಳದ ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಸಹ್ರಾನ್‌ಪುರ ಪೊಲೀಸರು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.