ಇವತ್ತಿನ ದರ ಪಟ್ಟಿ ಹೀಗಿದೆ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬೆಂಗಳೂರು: ಯುಗಾದಿ ಹಬ್ಬ ಕಳೆದ ಬಳಿಕವೂ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ ಕಂಡಿದೆ. ಗ್ರಾಮ್​ಗೆ 10 ರೂನಷ್ಟು ಏರಿದೆ. ಬೆಳ್ಳಿ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಯುಗಾದಿ ದಿನದಂದು ಬೆಳ್ಳಿ ಬೆಲೆ ಗ್ರಾಮ್​ಗೆ 1 ರೂನಷ್ಟು ಹೆಚ್ಚಿತ್ತು. ಚಿನ್ನವಂತೂ ಗ್ರಾಮ್​ಗೆ 30 ರೂ ಹೆಚ್ಚಾಗಿತ್ತು.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 65,750 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 71,730 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,450 ರೂಪಾಯಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 65,750 ರೂ, ಚೆನ್ನೈ: 66,700 ರೂ
ಮುಂಬೈ: 65,750 ರೂ, ದೆಹಲಿ: 65,900 ರೂ, ಕೋಲ್ಕತಾ: 65,750 ರೂ, ಕೇರಳ: 65,750 ರೂ, ಅಹ್ಮದಾಬಾದ್: 64,800 ರೂ, ಜೈಪುರ್: 65,900 ರೂ, ಲಕ್ನೋ: 65,900 ರೂ, ಭುವನೇಶ್ವರ್: 65,750 ರೂ ಇದೆ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಮಲೇಷ್ಯಾ: 3,500 ರಿಂಗಿಟ್ (61,354 ರೂಪಾಯಿ), ದುಬೈ: 2,627.50 ಡಿರಾಮ್ (59,537 ರೂಪಾಯಿ), ಅಮೆರಿಕ: 710 ಡಾಲರ್ (59,082 ರೂಪಾಯಿ), ಸಿಂಗಾಪುರ: 988 ಸಿಂಗಾಪುರ್ ಡಾಲರ್ (61,106 ರೂಪಾಯಿ), ಕತಾರ್: 2,660 ಕತಾರಿ ರಿಯಾಲ್ (60,705 ರೂಪಾಯಿ), ಸೌದಿ ಅರೇಬಿಯಾ: 2,710 ಸೌದಿ ರಿಯಾಲ್ (60,117 ರೂಪಾಯಿ), ಓಮನ್: 300.50 ಒಮಾನಿ ರಿಯಾಲ್ (64,952 ರೂಪಾಯಿ), ಕುವೇತ್: 222.50 ಕುವೇತಿ ದಿನಾರ್ (60,231 ರೂಪಾಯಿ) ಇದೆ.

Font Awesome Icons

Leave a Reply

Your email address will not be published. Required fields are marked *