ಇಸ್ರೇಲ್‌ನಲ್ಲಿ ನನ್ನ ಸಂಬಂಧಿಗಳನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ: ನಟಿ ಮಧುರಾ ನಾಯ್ಕ್‌

ಮುಂಬೈ: ಇಸ್ರೇಲ್‌ನಲ್ಲಿ ಹಮಾಸ್‌ ಉಗ್ರರು ಆದೇಶವನ್ನು ಅಕ್ಷರಶ ರಣರಂಗವಾಗಿ ಪರಿವರ್ತನೆ ಮಾಡಿದ್ದಾರೆ. ಎಲ್ಲಿ ನೋಡಿದರಲ್ಲಿ ಭೀಕರ ಸ್ಫೋಟದ ಸದ್ದು ಕೇಳಿಬರುತ್ತಿದೆ. ನೂರಾರು ಮಂದಿ ಸ್ಫೋಟದಿಂದ ಪ್ರಾಣಕಳೆದುಕೊಂಡಿದ್ದಾರೆ.

ಈ ನಡುವೆ ಹಿಂದಿ ಕಿರುತೆರೆ ನಟಿಯಾಗಿರುವ ಮಧುರಾ ನಾಯ್ಕ್ ಅವರು ತನ್ನ ಸೋದರ ತಂಗಿ ಮತ್ತು ಸೋದರ ಮಾವ ಭೀಕರವಾಗಿ ಕೊಲೆಯಾಗಿದ್ದಾರೆ ಎಂದು ತನ್ನ ಇನ್‌ಸ್ಟಾಗ್ರಾಂ ಪೋಸ್ಟ್‌ ನಲ್ಲಿ ಹೇಳಿದ್ದಾರೆ. ಇಸ್ರೇಲ್‌ನಲ್ಲಿ ಅವರ ಮಕ್ಕಳ ಕಣ್ಣುಗಳ ಮುಂದೆಯೇ ಇಬ್ಬರನ್ನು ಕೊಲ್ಲಲಾಯಿತು ಎಂದು ಅವರು ಹೇಳಿದ್ದಾರೆ.

ಇಸ್ರೇಲ್‌ನಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ ವಾಸಿಸುತ್ತಿರುವ , ಯಹೂದಿ (ಪೂರ್ವಜರು ವಲಸೆ ಬಂದಿದ್ದರು) ಆಗಿರುವ ಮಧುರಾ ತನ್ನ ಸಹೋದರಿ ಹತ್ಯೆ ವಿಚಾರ ಹಂಚಿಕೊಂಡ ಬಳಿಕ ಅನೇಕರು ನಟಿ ಯಹೂದಿ ಆಗಿರುವುದಕ್ಕೆ ಅವರ ಮೇಲೆ ನಾನಾ ಕಮೆಂಟ್ ಮಾಡುತ್ತಿದ್ದಾರೆ ಎಂದು ಮಧುರಾ ಹೇಳಿದ್ದಾರೆ.

Font Awesome Icons

Leave a Reply

Your email address will not be published. Required fields are marked *