ಇಸ್ರೇಲ್ ಸೈನಿಕರಿಗೆ ಉಚಿತ ಊಟ ಒದಗಿಸಿದ ಕಾರಣಕ್ಕೆ ಇಂಡೋನೇಷಿಯಾ, ಫ್ರಾನ್ಸ್ ಹಾಗು ಕೆಲ ಮುಸ್ಲಿಂ ಪ್ರಾಬಲ್ಯವಿರುವ ದೇಶಗಳಲ್ಲಿ ಬಾಯ್ಕಾಟ್ ಭೀತಿ ಭೀಕರವಾಗುತ್ತಿದ್ದಂತೆ ಮೆಕ್‌ಡೊನಾಲ್ಡ್ ಇಸ್ರೇಲ್‌ನಲ್ಲಿರುವ ತನ್ನ ರೆಸ್ಟೋರೆಂಟ್‌ಗಳನ್ನು ಮರುಖರೀದಿಸಲು ಮುಂದಾಗಿದೆ.
ಈಗಾಗಲೇ ಅಲೋನ್ಯಾಲ್ ಎಂಬ ಫ್ರಾಂಚೈಸಿಯಿಂದ ೨೨೫ ರೆಸ್ಟೋರೆಂಟ್‌ಗಳನ್ನು ಹಿಂಪಡೆಯಲಾಗಿದೆ ಎಂದು ಮೆಕ್‌ಡೊನಾಲ್ಡ್ಸ್ ಮಾಹಿತಿ ನೀಡಿದೆ.
ಕುವೈತ್, ಮಾಲೇಷಿಯಾ, ಪಾಕಿಸ್ತಾನಗಳಂತಹ ಮುಸ್ಲಿಂ ಪ್ರಾಬಲ್ಯವುಳ್ಳ ದೇಶಗಳು ಮೆಕ್‌ಡೊನಾಲ್ಡ್ಸ್‌ನಿಂದ ಅಂತರ ಕಾಯ್ದುಕೊಂಡು ಖರೀದಿಯನ್ನು ನಿಲ್ಲಿಸಿದ್ದವು. ಈ ಬಹಿಷ್ಕಾರದಿಂದ ಮೆಕ್‌ಡೊನಾಲ್ಡ್ಸ್‌ಗೆ ಭಾರೀ ನಷ್ಟ ಉಂಟಾಗಿತ್ತು.
ಮೆಕ್‌ಡೊನಾಲ್ಡ್ಸ್ ಯುದ್ಧಗ್ರಸ್ತ ಇಸ್ರೇಲ್‌ನಲ್ಲಿ ಸೈನಿಕರು, ಪೋಲಿಸರು, ಆಸ್ಪತ್ರೆಗಳು, ಸ್ಥಳೀಯರು ಹಾಗು ರಕ್ಷಣಾ ಪಡೆಗಳಿಗೆ ಉಚಿತ ಆಹಾರವನ್ನು ಒದಗಿಸಿತ್ತು.