ಈ ಎರಡು ಅಪ್ಲಿಕೇಶನ್ ತೆಗೆದುಹಾಕಿದ ಆಪಲ್ ಮತ್ತು ಗೂಗಲ್

ನವದೆಹಲಿ : ಸೈಬರ್ ವಂಚನೆಯನ್ನ ತಡೆಯಲು ಭಾರತದಲ್ಲಿ ಈ ಎರಡು ಅಪ್ಲಿಕೇಶನ್ಗಳ ವೆಬ್ಸೈಟ್ಗಳನ್ನ ನಿರ್ಬಂಧಿಸುವಂತೆ ಕೇಂದ್ರ ಸರ್ಕಾರವು ಸೂಚಿಸಿತ್ತು. ಅದರಂತೆಯೇ ಗೂಗಲ್ ಮತ್ತು ಆಪಲ್ ಭಾರತದಲ್ಲಿನ ತಮ್ಮ ಅಪ್ಲಿಕೇಶನ್ ಸ್ಟೋರ್ಗಳಿಂದ ಅಂತರರಾಷ್ಟ್ರೀಯ ಇ-ಸಿಮ್ ಸೇವೆಗಳನ್ನ ನೀಡುವ ಎರಡು ಅಪ್ಲಿಕೇಶನ್ಗಳನ್ನ ತೆಗೆದುಹಾಕಿದೆ. ದೂರಸಂಪರ್ಕ ಸಚಿವಾಲಯದ ಅಧೀನದಲ್ಲಿರುವ ದೂರಸಂಪರ್ಕ ಇಲಾಖೆಯ ಆದೇಶದ ಮೇರೆಗೆ ಅಪ್ಲಿಕೇಶನ್ಗಳನ್ನು ತೆಗೆದುಹಾಕಲಾಗಿದೆ.

ನಿಷೇಧಿತ ಅಪ್ಲಿಕೇಶನ್ಗಳೆಂದರೆ ಐರಾಲೋ ಮತ್ತು ಹೊಲಾಫ್ಲಿ. ಈ ಅಪ್ಲಿಕೇಶನ್ಗಳನ್ನ ಭಾರತೀಯ ಮಾರುಕಟ್ಟೆಗೆ ಗೂಗಲ್ ಪ್ಲೇ ಸ್ಟೋರ್ನಿಂದ ತೆಗೆದುಹಾಕಲಾಗಿದೆ. ಎರಡೂ ಅಪ್ಲಿಕೇಶನ್ಗಳು ಜಾಗತಿಕವಾಗಿ ವಿವಿಧ ಪ್ರದೇಶಗಳಲ್ಲಿ ಇ-ಸಿಮ್ ಸಕ್ರಿಯಗೊಳಿಸುವ ಟೆಲಿಕಾಂ ಸೇವೆಗಳನ್ನ ನೀಡುತ್ತವೆ.

ಆಪಲ್ ಮತ್ತು ಗೂಗಲ್ ಎರಡೂ ಈ ಅಪ್ಲಿಕೇಶನ್ಗಳನ್ನ ತೆಗೆದುಹಾಕುವ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಗುರುವಾರ (ಜ. 4) ಡಿಒಟಿಯಿಂದ ಆದೇಶಗಳನ್ನ ಸ್ವೀಕರಿಸಿದ ನಂತರ ಕಂಪನಿಗಳು ಕ್ರಮ ಕೈಗೊಂಡಿವೆ.

 

Font Awesome Icons

Leave a Reply

Your email address will not be published. Required fields are marked *