ಈ ರಾಶಿಯವರು ಸ್ತ್ರೀಯರಿಗೆ ಸಹಾಯ ಮಾಡುವ ಮುನ್ನ ಎಚ್ಚರ

ರಾಶಿ ಭವಿಷ್ಯ ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಇಂದಿನ (ಮಾರ್ಚ್​​​​ 19) ರಾಶಿ ಭವಿಷ್ಯದಲ್ಲಿ ಕೆಲ ರಾಶಿ ಫಲ ಹೇಗಿದೆ ಎಂದು ನೋಡುವುದಾದರೇ,

ಸಿಂಹ ರಾಶಿ : ಇಂದು ನಿಮ್ಮ ಕಾರ್ಯಕ್ಕೆ ಬರುವ ಹಣಕಾಸಿನ ವಿಘ್ನವನ್ನು ಮಿತ್ರರು ಸರಿ ಮಾಡುವರು. ಕೃಷಿಯ ಬಗ್ಗೆ ಅನೇಕ ಕಾರಣಗಳಿಂದ ಆಸಕ್ತಿಯು ಸದ್ಯ ಕಡಿಮೆ ಆಗುವುದು. ನಿಮ್ಮ ಸಹಾಯವು ಇಂದು ಯಾವುದಾದರೊಂದು ರೀತಿಯಲ್ಲಿ ಹಿಂದಿರುಗಬಹುದು. . ರಾಜಕೀಯ ಪ್ರೇರಿತದಿಂದ ನಿಮ್ಮ ಬಗ್ಗೆ ಸುಳ್ಳು ಸುದ್ದಿಗಳು ಬರಬಹುದು. ಪ್ರಭಾವಿ ಜನರು ನಿಮ್ಮನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಕಾರ್ಯವನ್ನು ಸಾಧಿಸಿಕೊಳ್ಳುವರು. ಮಕ್ಕಳ ಏಳಿಗೆಯಲ್ಲಿ ನಿಮಗೆ ಕುತೂಹಲ ಬರಬಹುದು.

ಕನ್ಯಾ ರಾಶಿ : ಸಾಧುಗಳ ಜೊತೆ ಆಪ್ತ ಸಮಾಲೋಚನೆ ಇರುವುದು. ಸಾಮಾಜಿಕವಾಗಿ ಜನರ ಪ್ರೀತಿಯನ್ನು ಪಡೆಯುವಿರಿ. ವಿವಾಹಕ್ಕೆ ನೀವು ಕ್ಷಣ ಗಣನೆ ಮಾಡುತ್ತಿರುವಿರಿ. ಅಪೂರ್ಣವಾದ ಕೆಲಸಗಳಿಂದ‌ ಚಿಂತೆ ಹೆಚ್ಚಾದೀತು. ಅನಾರೋಗ್ಯವು ನೆಪವಾಗಬಹುದು. ಸ್ತ್ರೀಯರಿಗೆ ಸಹಾಯ ಮಾಡಲು ಹೋಗಿ ಹಾಸ್ಯಕ್ಕೆ ಒಳಗಾಗುವಿರಿ. ಹೂಡಿಕೆಯನ್ನು ಮಾಡುವುದು ನಿಮಗೆ ಅನಿವಾರ್ಯವಾಗಬಹುದು.

ವೃಶ್ಚಿಕ ರಾಶಿ : ಇಂದಿನ ವ್ಯಾಪಾರವನ್ನು ಬಹಳ ಚುರುಕಿನಿಂದ ಮಾಡುವಿರಿ. ನಿಮ್ಮ‌ ನಿರ್ಧಾರಗಳನ್ನು ಬೇರೆ ಯಾರಾದರೂ ಬದಲಿಸಬಹುದು. ಉತ್ಸಾಹದಿಂದ ಇರಲು ನಿಮಗೆ ಮಾರ್ಗಗಳೂ ಕಡಿಮೆ‌ ಇರಬಹುದು. ಇಷ್ಟವಿಲ್ಲದಿದ್ದರೂ ಉದ್ಯೋಗಕ್ಕೆ ತೆರಳಬೇಕಾದೀತು. ಮೇಲಧಿಕಾರಿಗಳ ಮಾತು ಕಿರಿಕಿರಿ ಎನಿಸಬಹುದು. ಉದ್ಯೋಗದ ಸ್ಥಳದಲ್ಲಿ ಮಹಿಳೆಯರಿಂದ ದೂರವಿರಿ. ಇಲ್ಲಿ ಸ್ತ್ರೀಯಿಂದ ಮುಖಭಂಗವಾಗಬಹುದು.

ಕಟಕ ರಾಶಿ: ಇಂದು ನಿಮಗೆ ಸ್ತ್ರೀಯರಿಂದ ಅಪವಾದ ಬರಬಹುದು. ಹಿರಿಯರ ಜೊತೆ ಸೌಜನ್ಯದಿಂದ ನಡೆದುಕೊಳ್ಳಬೇಕು. ದುಂದುವೆಚ್ಚಕ್ಕೆ ಯಾರಾದರೂ ತಿಳಿಹೇಳಿಯಾರು. ಇಂದು ನೀವು ಯಾರಿಂದಲಾದರೂ ಸಹಾಯವನ್ನು ಪಡೆಯುವಿರಿ. ಕಾರ್ಯಸ್ಥಳದ ಬದಲಾವಣೆ ಇರಲಿದೆ. ನಿಮ್ಮ ಶ್ರಮಕ್ಕೆ ಯೋಗ್ಯ ವರಮಾನ ಇಲ್ಲ ಎನಿಸಬಹುದು.

ಮೀನ ರಾಶಿ: ನಿಮ್ಮ ಅತಿಯಾದ ಸಭ್ಯತೆಯು ದುರುಪಯೋಗವಾಗಬಹುದು. ಕೌಟುಂಬಿಕವಾಗಿ ಸ್ಥಿರಾಸ್ತಿಯ ವಿಚಾರದಲ್ಲಿ ಕಲಹವು ಉಂಟಾಗುವ ಸಾಧ್ಯತೆ ಇದೆ. ಇಂದು ಮಾಡುವ ಕಾರ್ಯದಲ್ಲಿ ಪ್ರಾಮಾಣಿಕತೆ ಇರಲಿ. ಇಷ್ಟ ಬಂದ ಕಡೆ ನೀವು ಸುತ್ತಾಡುವಿರಿ. ಹೊಸ ಅನ್ವೇಷಣೆಯನ್ನು ನೀವು ಇಷ್ಟಪಡುವಿರಿ. ಆರ್ಥಿಕ ಸಂಕಟವನ್ನು ಸ್ನೇಹಿತರ ಸಹಾಯವನ್ನು ಪಡೆದು ಸರಿಮಾಡಿಕೊಳ್ಳುವಿರಿ. ನಿಮ್ಮ‌ ಮಾತಿನ ಮೇಲೆ‌ ನಿಯಂತ್ರಣವಿರಲಿ.

Font Awesome Icons

Leave a Reply

Your email address will not be published. Required fields are marked *