ಈ ಸಿಂಪಲ್​ ಕೆಲಸ ಮಾಡಿದರೆ ಸಿಗುತ್ತೆ ಫ್ರೀ ‘ಸಲಾರ್​’ ಟಿಕೆಟ್

ಸಲಾರ್​’ ಸಿನಿಮಾದ ಫಸ್ಟ್​ ಡೇ ಫಸ್ಟ್​ ಶೋ ಟಿಕೆಟ್​ ಪಡೆಯಲು ಪ್ರಭಾಸ್​ ಅಭಿಮಾನಿಗಳಿಗೆ ಒಂದು ಅವಕಾಶ ಸಿಕ್ಕಿದೆ. ಅದಕ್ಕಾಗಿ ಒಂದು ಸಿಂಪಲ್​ ಕೆಲಸ ಮಾಡಬೇಕು. ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ 5 ಮಂದಿಗೆ ಈ ಸಿನಿಮಾದ ಉಚಿತ ಟಿಕೆಟ್​ ಸಿಗಲಿದೆ. ಆ ಬಗ್ಗೆ ‘ಹೊಂಬಾಳೆ ಫಿಲ್ಸ್ಮ್​’ ಸಂಸ್ಥೆಯು ಮಾಹಿತಿ ಹಂಚಿಕೊಂಡಿದೆ.

ಹೊಂಬಾಳೆ ಫಿಲ್ಮ್ಸ್​’ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಒಂದು ಹೊಸ ಫೋಟೋ ಹಂಚಿಕೊಳ್ಳಲಾಗಿದೆ. ಈ ಫೋಟೋಗೆ ಚಂದದ ಕ್ಯಾಪ್ಷನ್​ ನೀಡಲು ಸೂಚಿಸಲಾಗಿದೆ. ಕಮೆಂಟ್​ ಮಾಡುವ ಮೂಲಕ ಎಲ್ಲರೂ ಕ್ಯಾಪ್ಷನ್​ ನೀಡಬಹುದು. ಅತ್ಯುತ್ತಮ ಕ್ಯಾಪ್ಷನ್​ ನೀಡುವ 5 ಮಂದಿಗೆ ‘ಸಲಾರ್​’ ಸಿನಿಮಾದ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್​ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಲಾಗಿದೆ. ಅದಕ್ಕಾಗಿ ಅಭಿಮಾನಿಗಳು ಮುಗಿಬಿದ್ದು ಕಮೆಂಟ್​ ಮಾಡುತ್ತಿದ್ದಾರೆ. ಒಂದು ಗಂಟೆಯೊಳಗೆ ಸಾವಿರಾರು ಕಮೆಂಟ್​ಗಳು ಬಂದಿವೆ.

ಇನ್ನು ಡಿಸೆಂಬರ್​ 1ರಂದು ಸಂಜೆ 7.19ಕ್ಕೆ ಈ ಸಿನಿಮಾದ ಟ್ರೇಲರ್​ ರಿಲೀಸ್​ ಆಗಲಿದೆ. ಈ ಸಿನಿಮಾದಲ್ಲಿ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್​ ಸುಕುಮಾರನ್​ ಅವರು ಒಂದು ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾರೆ. ಕನ್ನಡ, ತೆಲುಗು, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

Font Awesome Icons

Leave a Reply

Your email address will not be published. Required fields are marked *