ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾದ ರೈತರನ್ನು ನೆನೆದು ಕಣ್ಣಿರು ಹಾಕಿದ ಭಗಿರಥ ನಾಟಿಕಾರ

ಕಲಬುರಗಿ: ಅಫಜಲಪುರ ತಾಲೂಕಿನ ಭೀಮಾ ನದಿಯು ಬರಿದಾಗಿದೆ ಎಂದು ಶಿವಕುಮಾರ ನಾಟಿಕಾರ ನೇತೃತ್ವದಲ್ಲಿ ಆರು ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದು,ಇಂದು ಪಟ್ಟಣವನ್ನು ಬಂದ್ ಮಾಡಿ ರೈತರು ಹಾಗೂ ತಾಲೂಕಿನ ಪ್ರಗತಿಪರ ಮುಖಂಡರು ಶಿವಕುಮಾರ ನಾಟಿಕಾರ ಅವರ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಅಪರ ಜಿಲ್ಲಾಧಿಕಾರಿಗಳಾದ ರಾಯಪ್ಪ ಹುಣಸಗಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.ಈಗಾಗಲೇ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪತ್ರಗಳ ಮುಖಾಂತರ ಜಿಲ್ಲಾಧಿಕಾರಿಗಳು ಮಾಹಿತಿಯನ್ನು ರವಾನೆ ಮಾಡಿದ್ದಾರೆ.ಅದಲ್ಲದೇ ಆಲಮಟ್ಟಿ ಜಲಾಶಯದಿಂದ ಬಳಗಾನೂರ ಕೆರೆಗೆ‌ ನೀರು ತುಂಬಿಸುವ ಕಾರ್ಯ ನಡೆದಿದ್ದು, ಒಂದು ಟಿಎಮಸಿ ನೀರು ಭೀಮಾ ನದಿಗೆ ಬಿಡುವ ಕಾರ್ಯ ನಡೆದಿದೆ ಎರಡ್ಮುರು ದಿನಗಳಲ್ಲಿ ಭೀಮಾ ನದಿಗೆ ನೀರು ಹರಿಸಲಾಗುವುದು ಎಂದರು. ಸರಕಾರದ ಅಧೀನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ‌ ಉಜ್ಜಯಿನಿ ಜಲಾಶಯದಿಂದ 5 ಟಿಎಮಸಿ ನೀರು ಹರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು. ನಂತರ ಉಪವಾಸ  ಸತ್ಯಾಗ್ರಹ ಮೊಟಕುಗೊಳಿಸುವಂತೆ  ಶಿವಕುಮಾರ ನಾಟಿಕಾರ ಹಾಗೂ ರೈತ ಮಖಂಡರಿಗೆ ಮನವಿ ಮಾಡಿದರು.

ನಂತರ ಮಾತನಾಡಿದ ಶಿವಕುಮಾರ ನಾಟಿಕಾರ ಅಧಿಕಾರಿಗಳಿಗೆ ಸನ್ಮಾರ್ಯಧೆ ಸಲ್ಲಿಸಿ ಮಾತನಾಡಿದರು. ಭೀಮಾ ನದಿಯ ನೀರಿಗಾಗಿ ಸುಮಾರು 9 ವರ್ಷಗಳಿಂದ ಸತತ ಹೋರಾಟಗಳನ್ನು ಮಾಡುತ್ತ ಬಂದಿದ್ದೆನೆ.ಆದರೆ ಇದ್ಯಾವುದು ನನ್ನ ಸ್ವಾರ್ಥಕ್ಕಾಗಿ ಅಲ್ಲ.ಜನರಿಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳ ಕೊರತೆ ಆಗಬಾರದು.ನನ್ನ ತಾಲೂಕಿನ ಜನ ಯಾವುದೇ ತೊಂದರೆಯಿಂದ ಇರಬಾರದು ಎಂದು ನನ್ನ ವೈವಾಹಿಕ ಜೀವನವನ್ನೆ ತ್ಯಾಗ ಮಾಡಿದವನ್ನು ನಾನು. ಕಳೆದ ಆರೇಳ ವರ್ಷಗಳ ಹಿಂದೆ ಗಾಣಗಾಪುರದ ಭೀಮಾ ನದಿಯಲ್ಲಿ 14 ದಿನ ಸತ್ಯಾಗ್ರಹ ಮಾಡಿದೆ. ಈಗ ಭೀಕರ ಬರಗಾಲವಿದೆ ಕುಡಿಯುವ ನೀರಿಗಾಗಿ ಜನ ಜಾನುವಾರುಗಳು ಪರದಾಡುವಂತಹ ಪರಸ್ಥಿತಿ ನಿರ್ಮಾಣವಾಗಿದ್ದು,ಕಳೆದ ಆರು ದಿನಗಳಿಂದ ನಡೆಯುವತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಪಕ್ಷಾತೀತವಾಗಿ ಜಾತ್ಯಾತೀತವಾಗಿ ತಾಲೂಕಿನ ಎಲ್ಲಾ ಜನರು ರೈತ ಮುಖಂಡರು ನನ್ನ ಪ್ರತಿಭಟನೆಗೆ ಬೆಂಬಲವಾಗಿ ನಿಂತಿದ್ದಿರಿ ನಿಮ್ಮ ಋಣ ತಿರಸಲು ಸಾಧ್ಯವೆ ಎಂದು ಕಣ್ಣಿರು ಹಾಕಿದರು.

ಶಿವಕುಮಾರ ನಾಟಿಕಾರ ಕಣ್ಣಿರು ಹಾಕುತ್ತಿದ್ದಂತೆ ಪ್ರತಿಭಟನೆಯಲ್ಲಿ ಭಾಗಿಯಾದವರ ಕಣ್ಣಿರು ಒದ್ದೆಯಾದವು. ಅಧಿಕಾರಿಗಳ ಮನವೊಲಿಕೆಗೆ ಬಗ್ಗದ ನಾಟಿಕಾರ ಭೀಮಾ ನದಿಗೆ ನೀರು ಹರಿಸುವ ವರೆಗೆ ಉಪವಾಸ ಸತ್ಯಾಗ್ರಹ ಕೈಬಿಡುವುದಿಲ್ಲ. ಅದಲ್ಲದೇ ಮಹಾರಾಷ್ಟ್ರದ ಉಜ್ಜಯಿನಿ ಜಲಾಶಯಕ್ಕೆ ಜಿಲ್ಲಾಧಿಕಾರಿಗಳ ನಿಯೋಗ ಹೋಗಿ ಭೇಟಿ ನೀಡುವ ಮುಖಾಂತರ ವಾಸ್ತವ ಸ್ಥಿತಿ ಪರಿಗಣಿಸಿ ನೀರು ಬಿಡುವ ಪ್ರಯತ್ನ ಮಾಡಬೇಕು. ಆಲಮಟ್ಟಿ ಜಲಾಶಯದಿಂದ ಒಂದು ಟಿಎಮಸಿ ಅಲ್ಲ ಎರಡು ಟಿಎಮಸಿ ನೀರು ಭೀಮಾ ನದಿಗೆ ಹರಿಸಬೇಕು. ರಾಜ್ಯ ಸರಕಾರಕ್ಕೂ ಜಿಲ್ಲಾಧಿಕಾರಿಗಳ ನಿಯೋಗ ಕಳುಹಿಸಿ ಭೀಮಾ ನದಿಯ ರೈತರಿಗೆ ಅನ್ಯಾಯವಾಗದಂತೆ ಕಾನೂನು ಬದ್ದವಾಗಿ ಬಿಡಬೇಕಾದ ನೀರನ್ನ ಪ್ರತಿವರ್ಷ ಬಿಡಬೇಕು.ಇವೆಲ್ಲವೂ ಸಕಾರಗೊಂಡಾಗ ಮಾತ್ರ ನಾನು ಉಪವಾಸ ಸತ್ಯಾಗ್ರಹ ಕೈಬಿಡುವುದನ್ನು ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಜಿಲ್ಲಾಧಿಕಾರಿಗಳ ತಂಡ ಪ್ರತಿಭಟನೆಯಿಂದ ಹೊರನಡೆಯಿತು. ಇದೆ ಸಂದರ್ಭದಲ್ಲಿ ತಹಶೀಲ್ದಾರ ಸಂಜುಕುಮಾರ ದಾಸರ, ಭೀಮಾ ಏತನೀರಾವರಿ ಕಾರ್ಯಪಾಲಕ ಅಭಿಯಂತರ ಸಂತೋಷ ಸಜ್ಜನ,ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಲಕ್ಷ್ಮಿಕಾಂತ ಬಿರಾದಾರ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *