ಉಫ್, ಅನಿಮಲ್​ ಚಿತ್ರಕ್ಕಾಗಿ ಸಂಪೂರ್ಣ ಬೆತ್ತಲಾದ ನಟಿ: ವಿಡಿಯೋ ನೋಡಿ

ಮುಂಬೈ: ಅನಿಮಲ್‌ ಚಿತ್ರ ಕಲೆಕ್ಷನ್‌ ವಿಚಾರದಲ್ಲಿ ಭಾರಿ ಸದ್ದು ಮಾಡುತ್ತಿದೆ. ಚಿತ್ರ ಬಿಡುಗಡೆಯಾಗಿ ಮೂರೇ ದಿನದಲ್ಲಿ 230 ಕೋಟಿ ರೂಪಾಯಿಗಳನ್ನು ಗಳಿಸಿದೆ. ಅದೇ ರೀತಿ ಹಸಿ ಬಿಸಿ ದೃಶ್ಯಗಳಿಂದಲೂ ಚಿತ್ರ ಗಲ್ಲಿ ಗಾಸಿಪ್‌ ಆಗಿದೆ. ಅಡಲ್ಟ್​ ಸರ್ಟಿಫಿಕೇಟ್​ ಪಡೆದಿರುವ ಈ ಚಿತ್ರದಲ್ಲಿನ ಕೆಲವು ಹಸಿಬಿಸಿ ದೃಶ್ಯಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಇದಾಗಲೇ ಕತ್ತರಿ ಹಾಕಿದೆ.

ಕತ್ತರಿ ಹಾಕಿದ ಮೇಲಷ್ಟೇ ಚಿತ್ರ ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಗೂ ಮೊದಲು ರಿಲೀಸ್​ ಆಗಿದ್ದ ಹಾಡೊಂದು ಹಲ್​ಚಲ್​ ಸೃಷ್ಟಿಸಿತ್ತು. ಅದರಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಅವರ ಲಿಪ್​ಲಾಕ್​ ಸೀನ್​ ನೋಡಿ ಫ್ಯಾನ್ಸ್​ ಉಫ್​ ಎಂದಿದ್ದರು. ರಶ್ಮಿಕಾ ಮಂದಣ್ಣ ಜೊತೆಗಿನ ಬೆಡ್​ರೂಮ್​ ಸೀನ್​ ಲೀಕ್​ ಆಗಿರುವ ಬೆನ್ನಲ್ಲೇ, ರಣಬೀರ್​ ಜೊತೆ ಇನ್ನೋರ್ವ ನಟಿ ಸಂಪೂರ್ಣವಾಗಿ ಬೆತ್ತಲಾಗಿದ್ದ ವಿಡಿಯೋ ವೈರಲ್​ ಆಗಿದೆ. ಇವರಿಬ್ಬರ ಲಿಪ್​ಲಾಕ್​ ಸೀನ್​ ಹಾಗೂ ಬೆಡ್​ ಮೇಲಿನ ದೃಶ್ಯಗಳು ವೈರಲ್​ ಆಗಿವೆ. ಅಷ್ಟಕ್ಕೂ ಈ ನಟಿಯ ಹೆಸರು ತೃಪ್ತಿ ಡಿಮ್ರಿ. 2017 ರಲ್ಲಿ ಶ್ರೀದೇವಿ ಅಭಿನಯದ ಮಾಮ್ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡ ತೃಪ್ತಿ ಡಿಮ್ರಿ ಇದೀಗ ರಣಬೀರ್​ ಕಪೂರ್​ ಜೊತೆ ಬೆತ್ತಲಾಗಿ ಚಿತ್ರೀಕರಣ ಮಾಡಿದ್ದಾರೆ. ಅಂದಹಾಗೆ, ಈ ಹಿಂದೆ ತೃಪ್ತಿ ನಾಗಿನ್ ಸೀರೀಸ್ 3ರಲ್ಲಿ ಕಾಣಿಸಿಕೊಂಡಿದ್ದರು.

Font Awesome Icons

Leave a Reply

Your email address will not be published. Required fields are marked *