ಎಂಎಲ್ಸಿ ಎಚ್.ವಿಶ್ವನಾಥ್ ಪುತ್ರನ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಆನ್’ಲೈನ್ ಖದೀಮ ! – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್Promotion

ಮೈಸೂರು, ಆಗಸ್ಟ್ 05, 2023 (www.justkannada.in): ದಿನೇ ದಿನೇ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೆ ಆನ್‌ಲೈನ್ ಮೂಲಕ ಎಂಎಲ್‌ಸಿ ಎಚ್.ವಿಶ್ವನಾಥ್ ಪುತ್ರನ ಖಾತೆಗೆ ವಂಚಕರು ಕನ್ನ ಹಾಕಿದ್ದಾರೆ.

ಎಚ್.ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಅವರ ಬ್ಯಾಂಕ್ ಖಾತೆಗೆ ಖದೀಮರು ಕನ್ನ ಹಾಕಿದ್ದಾರೆ. ಅಪರಿಚತನೊಬ್ಬ ವಂಚಿಸಿ 1.99 ಲಕ್ಷ ರೂ. ವರ್ಗಾವಣೆ ಮಾಡಿಕೊಂಡಿದ್ದಾನೆ. ಎಟಿಎಂಗೆ ಹಣ ಡ್ರಾ ಮಾಡಲು ಹೋಗಿದ್ದ ಅಮಿತ್ ಅವರ ಖಾತೆಯಿಂದ ದೊಡ್ಡ ಮೊತ್ತದ ಹಣವನ್ನು ಎಗರಿಸಲಾಗಿದೆ.

ಹಣ ಬಾರದ ಹಿನ್ನೆಲೆ ಕಸ್ಟಮರ್ ಕೇರ್ ನಂಬರ್‌‌ಗೆ ಕರೆ ಮಾಡಿದಾಗ ಈ ವಂಚನೆ ಆಗಿದೆ. ಗೂಗಲ್‌ನಲ್ಲಿ ನಂಬರ್ ಹುಡುಕಿ ಕರೆ ಮಾಡಿದ ವೇಳೆ ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ ಬ್ಯಾಂಕ್ ಖಾತೆ ವಿವರ ಪಡೆದು ಹಣ ಲಪಟಾಯಿಸಿದ್ದಾನೆ. ಈ ಕುರಿತು ಸೈಬರ್ ಠಾಣೆಗೆ ಅಮಿತ್ ದೇವರಹಟ್ಟಿ ದೂರು ನೀಡಿದ್ದಾರೆ.

ಜುಲೈ 28 ರಂದು ಈ ಘಟನೆ ನಡೆದಿದೆ ಎಂದು ‘ಜಸ್ಟ್ ಕನ್ನಡ’ಗೆ ಅಮಿತ್ ಮಾಹಿತಿ ನೀಡಿದ್ದಾರೆ.


Previous articleಅಗತ್ಯ ವಸ್ತುಗಳ ಬೆಲೆ ಏರಿಕೆ: ಸಂಸತ್ತಿನಲ್ಲೇ ಒಪ್ಪಿಕೊಂಡ ಕೇಂದ್ರ ಸರಕಾರ !


Font Awesome Icons

Leave a Reply

Your email address will not be published. Required fields are marked *