ಎಆರ್​ ರೆಹಮಾನ್ ಮೇಲಿನ ಅಭಿಮಾನ ಸತ್ತು ಹೋಯ್ತು ಎಂದ್ರು ಫ್ಯಾನ್ಸ್: ಯಾಕೆ ಗೊತ್ತ ?

ಚೆನ್ನೈ: ಖ್ಯಾತ ಗಾಯಕ, ಮ್ಯೂಸಿಕ್​ ಡೈರೆಕ್ಟರ್​ ಎ ಆರ್ ರೆಹಮಾನ್ ಹಾಡಿಗೆ ಅಪಾರ ಅಭಿಮಾನಿಗಳಿದ್ದಾರೆ. ಆದ್ರೆ ತಮಿಳುನಾಡಿನ ಚೆನ್ನೈನಲ್ಲಿ ನಡೆದ RRR ಕನ್ಸರ್ಟ್​ನಲ್ಲಿ ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ. ​

ನಗರದ ಆದಿತ್ಯರಾಮ್‌ ಪ್ಯಾಲೆಸ್‌ನಲ್ಲಿ ಆಯೋಜಿಸಲಾಗಿದ್ದ ಮರಕ್ಕುಮಾ ನೆಂಜಂ ಎಂಬ ಕಾರ್ಯಕ್ರಮದಲ್ಲಿ ರೆಹಮಾನ್‌ ಭಾನುವಾರ ಸಂಜೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಆದರೆ ಇದಕ್ಕಾಗಿ ಆಯೋಜಕರು ಭಾರೀ ಪ್ರಮಾಣದ ದರ ಇರಿಸಿದ್ದು, 5 ಸಾವಿರ ರು.ನಿಂದ 50,000 ರು.ಗಳಿಗೆ ಒಂದು ಟಿಕೆಟ್‌ ವಿತರಿಸಿದ್ದಾರೆ.

ಸುಮಾರು 10 ಸಾವಿರ ಜನರು ಹಿಡಿಯಬಹುದಾದ ಮೈದಾನದಲ್ಲಿ 1 ಲಕ್ಷಕ್ಕೂ ಅಧಿಕ ಟಿಕೆಟ್‌ ವಿತರಿಸಲಾಗಿತ್ತು ಎನ್ನಲಾಗಿದೆ. ಇದಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿ ಜನರನ್ನು ನಿಯಂತ್ರಿಸಲು ಯಾವುದೇ ವ್ಯವಸ್ಥೆ ಇಲ್ಲ. ಅಲ್ಲದೇ ಪಾರ್ಕಿಂಗ್‌ ಸೌಲಭ್ಯವೂ ಇರಲಿಲ್ಲ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಈ ನಡುವೆ ‘ಇನ್ನು ನಾವು ರೆಹಮಾನ್‌ ಅಭಿಮಾನಿಯೇ ಅಲ್ಲ. ಎಆರ್​ ರೆಹಮಾನ್ ಮೇಲಿನ ಅಭಿಮಾನ ಸತ್ತು ಹೋಯ್ತು’ ಎಂದೆಲ್ಲ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ.

 

ತನ್ನ ಅಭಿಮಾನಿಗಳು ಬೇಸರ ಹೊರ ಹಾಕಿದ ಬೆನ್ನಲ್ಲೇ ಟಿಕೆಟ್‌ ಪಡೆದೂ ಕೂಡ ಕಾರ್ಯಕ್ರಮ ನೋಡಲು ಸಾಧ್ಯವಾಗದವರಿಗೆ ಟಿಕೆಟ್‌ ಹಣ ಮರುಪಾವತಿ ಮಾಡುವುದಾಗಿ ರೆಹಮಾನ್‌ ಹೇಳಿದ್ದಾರೆ. ಎಟಿಟಿಸಿ ಕೂಡ ಟ್ವೀಟ್‌ ಮಾಡಿ ತಾನು ಹಣ ಮರಳಿಸುವುದಾಗಿ ಹೇಳಿದೆ.

Font Awesome Icons

Leave a Reply

Your email address will not be published. Required fields are marked *