ಎನ್‌ಕೌಂಟರ್ ಸ್ಪೆಷಲಿಸ್ಟ್‌ ಪ್ರದೀಪ್ ಶರ್ಮಾಗೆ ಜೀವಾವಧಿ ಶಿಕ್ಷೆ

ಮುಂಬೈ: ಛೋಟಾ ರಾಜನ್‌ ಗ್ಯಾಂಗ್‌ನ ರಾಮ್‌ನಾರಾಯಣ ಗುಪ್ತಾ ಅಲಿಯಾಸ್‌ ಲಖನ್‌ ಭಯ್ಯಾ ಎಂಬಾತನನ್ನು ನಕಲಿ ಎನ್‌ಕೌಂಟರ್‌ ನಡೆಸಿ ಹತ್ಯೆ ಮಾಡಿದ್ದಕ್ಕಾಗಿ ಬಾಂಬೆ ಹೈಕೋರ್ಟ್ ಮುಂಬೈನ ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ತಮ್ಮ ಸೇವೆಯ ಅವಧಿಯಲ್ಲಿ ೧೧೨ ಗ್ಯಾಂಗ್​​ಸ್ಟರ್​​ಗಳನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡು ಎನ್‌ಕೌಂಟರ್ ಸ್ಪೆಷಲಿಸ್ಟ್‌ ಎನಿಸಿಕೊಂಡ ಶರ್ಮಾಗೆ ಮೂರು ವಾರಗಳಲ್ಲಿ ಶರಣಾಗುವಂತೆ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ-ದೇರೆ ಮತ್ತು ಗೌರಿ ವಿ ಗೋಡ್ಸೆ ಅವರ ಪೀಠ ಸೂಚಿಸಿದೆ.

ಇದೇ ಪ್ರಕರಣದಲ್ಲಿ ಇನ್ನೂ ೧೨ ಪೊಲೀಸ್ ಅಧಿಕಾರಿಗಳು ಮತ್ತು ನಾಗರಿಕ ಹಿತೇಶ್ ಸೋಲಂಕಿ ಅವರ ಶಿಕ್ಷೆಯನ್ನು ನ್ಯಾಯಪೀಠ ಎತ್ತಿಹಿಡಿದಿದೆಯಾದರೂ ನಾಗರಿಕರಾದ ಮನೋಜ್ ಮೋಹನ್ ರಾಜ್ ಅಲಿಯಾಸ್ ಮನ್ನು, ಶೈಲೇಂದ್ರ ಪಾಂಡೆ ಮತ್ತು ಸುರೇಶ್ ಶೆಟ್ಟಿ ಅವರನ್ನು ಖುಲಾಸೆಗೊಳಿಸಿದೆ.

ದಿಲೀಪ್ ಪಲಾಂಡೆ, ನಿತಿನ್ ಸರ್ತಾಪೆ, ಗಣೇಶ್ ಹರ್ಪುಡೆ, ಆನಂದ್ ಪಟಾಡೆ, ಪ್ರಕಾಶ್ ಕದಂ, ದೇವಿದಾಸ್ ಸಕ್ಪಾಲ್, ಪಾಂಡುರಂಗ ಕೋಕಂ, ರತ್ನಾಕರ ಕಾಂಬಳೆ, ಸಂದೀಪ್ ಸರ್ದಾರ್, ತಾನಾಜಿ ದೇಸಾಯಿ, ಪ್ರದೀಪ್ ಸೂರ್ಯವಂಶಿ ಮತ್ತು ವಿನಾಯಕ್ ಶಿಂಧೆ ಶಿಕ್ಷೆಗೊಳಗಾದ ಪೊಲೀಸ್ ಅಧಿಕಾರಿಗಳು.

Font Awesome Icons

Leave a Reply

Your email address will not be published. Required fields are marked *