ಎರಡನೇ ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಚಿಕ್ಕಬಳ್ಳಾಪುರ :  ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಮಾತಿದೆ. ಆದರೆ ಇಲ್ಲಿ ಗಲಾಟೆ ಕೊಲೆಯಲ್ಲಿ ಅಂತ್ಯ ಗೊಂಡಿದೆ. ತನ್ನ ಎರಡನೇ ಹೆಂಡತಿಯನ್ನು ಕೊಲೆಗೈದು ಮೂರು ದಿನಗಳ ಬಳಿಕ ಪೋಲಿಸರಿಗೆ ಸ್ವತಃ ಶರಣಾಗಿರುವ ಘಟನೆ ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ನಡೆದಿದೆ. ರೆಡ್ಡಿಲಕ್ಷ್ಮಿ(30) ಮೃತ ರ್ದುದೈವಿ.

ಹತ್ತು ವರ್ಷಗಳ ಹಿಂದೆ ಹರೀಶ್​ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣದಲ್ಲಿ ಮಮತಾ ಎಂಬುವವರ ಜೊತೆ ಮದುವೆಯಾಗಿ, ಇಬ್ಬರು ಗಂಡು ಮಕ್ಕಳು ಇದ್ದಾರೆ. ಇತ್ತ ವಿವಾತೆಯಾಗಿದ್ದ ರೆಡ್ಡಿಲಕ್ಷ್ಮಿ ಪತಿಯಿಂದ ವಿಚ್ಚೇದನ ಪಡೆದು, ಹರೀಶ್​ನನ್ನು ಎರಡನೆ ಮದುವೆಯಾಗಿದ್ದಳು. ಆದ್ರೆ, ಹರೀಶ್​ ಮದುವೆಯಾಗಿರುವ ವಿಚಾರ ತಿಳಿಸಿರಲಿಲ್ಲ.

ಇದೇ ವಿಚಾರವಾಗಿ ನಿನ್ನೆ ಇಬ್ಬರ ನಡುವೆ ಜಗಳ ನಡೆದಿದೆ ಜಗಳ ವಿಕೋಪಕ್ಕೆ ತಿರುಗಿ ಹರೀಶ್ ಪತ್ನಿಯನ್ನು ಉಸಿರುಗಟ್ಟಿಸಿದ್ದಾನೆ ಈ ವೇಳೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ನಂತರ ಮನೆಗೆ ಬೀಗ ಜಡಿದು ಮೊದಲನೆ ಹೆಂಡತಿ ಇದ್ದ ಹೊಸಕೋಟೆಗೆ ಹೋಗಿದ್ದ.ಎರಡನೆ ಹೆಂಡತಿ ಕೊಲೆ ಮಾಡಿದ ವಿಷಯ ಮೊದಲನೆ ಪತ್ನಿಗೆ ಇಂದು(ಏ.10) ತಿಳಿಸಿದ ಕಾರಣ, ಪತ್ನಿಯೇ ಆರೋಪಿ ಗಂಡನನ್ನು ಕರೆದುಕೊಂಡು ಹೋಗಿ ಹೋಸಕೋಟೆ ಪೊಲೀಸರಿಗೆ ಒಪ್ಪಿಸಿದ್ದಾಳೆ.

ವಿಷಯ ತಿಳಿಯುತ್ತಿದ್ದಂತೆ ಚಿಂತಾಮಣಿ ನಗರ ಠಾಣೆ ಪೊಲೀಸರು ಆರೋಪಿ ಹರೀಶ್​ನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಎರಡನೆ ಪತ್ನಿ ಇದ್ರೆ ಮೊದಲನೆ ಪತ್ನಿಯ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಕೋಪದಲ್ಲಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

 

 

Font Awesome Icons

Leave a Reply

Your email address will not be published. Required fields are marked *