ಎಲ್ಲಾ ರೋಗಿಗಳಿಗೂ ಇಲ್ಲ ICU ಭಾಗ್ಯ : ಆರೋಗ್ಯ ಸಚಿವಾಲಯ

ನವದೆಹಲಿ: ಬದುಕುಳಿಯುವ ಸಾಧ್ಯತೆ ಕಡಿಮೆಯಿರುವ ರೋಗಿಗಳನ್ನು ತೀವ್ರ ನಿಗಾ ಘಟಕ(ICU)ದಲ್ಲಿ ಇರಿಸಿಕೊಳ್ಳುವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತನ್ನ ಇತ್ತೀಚಿನ ಮಾರ್ಗಸೂಚಿಯಲ್ಲಿ ತಿಳಿಸಿದೆ.

೨೪ ತಜ್ಞರ ಅಭಿಪ್ರಾಯ ಆಧರಿಸಿದ ಐಸಿಯು ದಾಖಲಾತಿಯ ಕುರಿತ ಮಾರ್ಗಸೂಚಿಯಲ್ಲಿ, ಚಿಕಿತ್ಸೆಯಿಂದ ಚೇತರಿಸಿಕೊಳ್ಳದ ಅಥವ ಬದುಕಿ ಉಳಿಯುವ ಸಾಧ್ಯತೆ ತೀರಾ ಕಡಿಮೆ ಇರುವ ರೋಗಿಗಳನ್ನು ಐಸಿಯುನಲ್ಲಿರಿಸುವುದು ನಿಷ್ಟ್ರಯೋಜಕ. ರೋಗಿಯ ಸಂಬಂಧಿಕರು ವಿರೋಧಿಸಿದರೆ ಅನಾರೋಗ್ಯಕ್ಕೆ ತುತ್ತಾಗಿರುವ ವ್ಯಕ್ತಿಯನ್ನು ದಾಖಲಿಸಿಕೊಳ್ಳುವಂತಿಲ್ಲ ಎಂದು ತಿಳಿಸಲಾಗಿದೆ.

ಕೋವಿಡ್ ಗೆ ತುತ್ತಾದ ಸಂದರ್ಭದಲ್ಲಿ, ಸಂಪನ್ಮೂಲಗಳು ಲಭ್ಯವಿದ್ದಲ್ಲಿ, ಅಂಗಾಂಗ ವೈಫಲ್ಯ ಮತ್ತು ಕಸಿಯ ಅವಶ್ಯಕತೆ ಇದ್ದರೆ, ಹೃದಯ ಸಂಬಂಧಿ ಸಮಸ್ಯೆ ಅಥವ ಉಸಿರಾಟ ತೊಂದರೆ ಅಥವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಐಸಿಯು ಚಿಕಿತ್ಸೆಯನ್ನು ಒದಗಿಸಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Font Awesome Icons

Leave a Reply

Your email address will not be published. Required fields are marked *