ಎಲ್ಲಿದೆ ಚಂದ್ರಯಾನ ಸಂಭ್ರಮ, ಮಣಿಪುರದ ಘನಘೋರ ದೃಶ್ಯಗಳು ನನ್ನ ಕಣ್ಮುಂದೆ ಬರುತ್ತದೆ: ನಟ ಕಿಶೋರ್‌

ಬೆಂಗಳೂರು: ಚಂದ್ರಯಾನ ಯಶಸ್ಸು ಕಂಡು ದೇಶ ವಿದೇಶದ ಜನರು, ಭಾರತೀಯ ವಿಜ್ಞಾನಿಗಳು, ಇಸ್ರೋ ಸಂಸ್ಥೆಯ ಕಾರ್ಯವನ್ನು ಕೊಂಡಾಡುತ್ತಿದ್ದಾರೆ. ಆದರೆ ಕೆಲ ನಟರು ಈ ವಿಚಾರವನ್ನು ಅಪಹಾಸ್ಯ ಮಾಡುತ್ತಿದ್ದು, ಜನರಿಂದ ಟ್ರೋಲ್‌ ಗೆ ಒಳಗಾಗುತ್ತಿದ್ದಾರೆ. ಈ ಮೊದಲು ನಟ ಪ್ರಕಾಶ್‌ ರೈ ಚಂದ್ರಯಾನ ಕುರಿತು ಟ್ವೀಟ್‌ ಮಾಡಿ ತೀವ್ರ ಟ್ರೋಲ್ ಗೆ ಒಳಗಾದ ಬೆನ್ನಲ್ಲೇ ಇದೀಗ ಮತ್ತೋರ್ವ ನಟ ಕಿಶೋರ್ ಚಂದ್ರಯಾನ 3 ಬಗ್ಗೆ ಮಾತನಾಡಿದ್ದಾರೆ.

ಇನ್‌ ಸ್ಟಾಗ್ರಾಂ ಪೋಸ್ಟ್‌ ನಲ್ಲಿ ಚಂದ್ರಯಾನ ಸಂಭ್ರಮ ಎಲ್ಲಿದೆ ಎಂದು ಪ್ರಶ್ನಿಸಿ ನಟ ಕಿಶೋರ್‌ ಈ ರೀತಿ ಬರೆದುಕೊಂಡಿದ್ದಾರೆ.

ಚಂದ್ರನ ದಕ್ಷಿಣ ಧುೃವದ ಮೇಲೆ ಪ್ರಪಂಚದಲ್ಲೇ ಮೊತ್ತ ಮೊದಲ ಬಾರಿಗೆ ಭಾರತದ ಉಪಗ್ರಹ ಅಡಿಯಿರಿಸಿದೆ… ಹೆಮ್ಮೆಯಿದೆ , ಎದೆ ಬೀಗಿದೆ… ಆದರೆ ಸಂಭ್ರಮಿಸಲೇ ಎನ್ನುತ್ತಿರುವಂತೆಯೇ ನನ್ನ ಕಣ್ಣ ಮುಂದೆ . ನನ್ನ ದೇಶದ ಕುತಂತ್ರಿ ರಾಜಕಾರಿಣಿಗಳು ನನ್ನ ಮನೆಯ ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿ ಅತ್ಯಾಚಾರ ಮಾಡುತ್ತಿರುವ ಚಿತ್ರ ಬಂದು ನಿಲ್ಲುತ್ತದೆ … ನನ್ನ ರೈತ ಸಹೋದರರ ಮೇಲೆ ಜೀಪು ಹರಿಸಿ ಕೊಲ್ಲುತ್ತಿರುವ ಚಿತ್ರ… ಹಿಂದೂ ಮುಸ್ಲಿಂ ಮೂಲಭೂತವಾದಿಗಳಿಗೆ ಕುಮ್ಮಕ್ಕು ಕೊಟ್ಟು ದೇಶವನ್ನು ಒಡೆಯುತ್ತಿರುವ ಚಿತ್ರ… ನನ್ನ ಮುಸ್ಲಿಂ ಕ್ರಿಶ್ಚಿಯನ್ ಸಹೋದರ ಸಹೋದರಿಯರ ಮನೆ, ಹೊಟ್ಟೆಪಾಡಿನ ಅಂಗಡಿಗಳನ್ನು ಧರ್ಮಾಂಧ ಬುಲ್ಡೊಜರುಗಳು ಪುಡಿ ಪುಡಿ ಮಾಡುತ್ತಿರುವ ಚಿತ್ರ… ರಾಜಕೀಯ ದಾಳಗಳಾಗಿ ಸಾಯುತ್ತಲೇ ಇರುವ ಕಾಶ್ಮೀರದ ಜನತೆಯ ಚಿತ್ರ… ಇಂದಿಗೂ ದಲಿತರ, ಆದಿವಾಸಿಗಳ ಮೇಲೆ ಎಸಗುತ್ತಿರುವ ಹೇಸಿಗೆ ದೌರ್ಜನ್ಯದ ಚಿತ್ರ, ದೇಶದ ಯೋಧರನ್ನು ರಾಜಕಾರಿಣಿಗಳೇ ತಯಾರು ಮಾಡಿದ ಸಾವಿನ ಕೂಪಕ್ಕೆ ತಳ್ಳುವ ಚಿತ್ರ …. ಹೀಗೇ ನೂರಾರು. .. ಉಪಗ್ರಹಕ್ಕಿಂತ ಪರದೆಯ ಮೇಲೆ ಹೆಚ್ಚು ರಾರಾಜಿಸಿ ಮೆರೆದ ಪ್ರಧಾನಿಯಂತೆ ನಾನೂ ಕೂಡ ಸ್ವಾರ್ಥಿಯೂ, ಅಸೂಕ್ಷ್ಮಮತಿಯೂ, ಸಂವೇದನಾಹೀನನೂ ಆಗಬಾರದಿತ್ತೆ… ಸಂಬಳವೂ ಇಲ್ಲದೆ ದುಡಿದ ನನ್ನ ದೇಶದ ವಿಜ್ಞಾನಿಗಳ ಬೆವರ ಫಲವನ್ನು ಸಂಭ್ರಮಿಸಲು…???

Font Awesome Icons

Leave a Reply

Your email address will not be published. Required fields are marked *