ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಕಾರ್ಯಗಾರ, ಶೈಕ್ಷಣಿಕ ಮಾರ್ಗದರ್ಶನ. – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

ಮೈಸೂರು,ಜನವರಿ,24,2024(www.justkannada.in): ಮೈಸೂರು ದಕ್ಷಿಣ ವಲಯದ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಒಟ್ಟು 77 ಶಾಲೆಗಳಿಂದ 1,150 ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಒಂದು ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರವನ್ನು ಕ್ಷೇತ್ರದ ಶಾಸಕ ಶ್ರೀ ವತ್ಸ ಅವರು ಉದ್ಘಾಟಿಸಿದರು. ಮೈಸೂರು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಎಚ್ ಕೆ ಪಾಂಡವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸ್ವಾಮಿ ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಹಾಗೂ ಸಿದ್ಧತೆಗಳ ಬಗ್ಗೆ ಸುದೀರ್ಘವಾಗಿ ವಿದ್ಯಾರ್ಥಿಗಳ ಜೊತೆ ಒಂದು ಗಂಟೆಗಿಂತಲೂ ಹೆಚ್ಚು ಸಮಯ ಸಂವಾದ ನಡೆಸಿದರು.

ನಂಜನಗೂಡು ಶಿಕ್ಷಣ ಸಂಯೋಜಕ ರಮೇಶ್ ಕುಮಾರ್ ಮಾತನಾಡಿ, ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಮಕ್ಕಳು ಹೇಗೆ ಓದಬೇಕು ಯಾವ ಸಮಯದಲ್ಲಿ ಓದಬೇಕು ಯಾವ ರೀತಿ ಓದಬೇಕು ಎಂಬುದರ ಬಗ್ಗೆ ಓದುವ ಕಲೆಯ ಬಗ್ಗೆ ಸುದೀರ್ಘವಾಗಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಿ. ಎನ್ ರಾಜು, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜು, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ  ಅಧ್ಯಕ್ಷರು ಮಹೇಶ್ ಸಮನ್ವಯ ಅಧಿಕಾರಿಗಳಾದ ಶ್ರೀಕಂಠ ಸ್ವಾಮಿ, ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿ  ಮನೋಹರ್, ಶಿಕ್ಷಣ ಸಂಯೋಜಕ ಕುಮಾರ್, ಮಣಿಕಂಠ ವಸಂತರಾಜು , ವಲಯದ ಬಿ.ಆರ್.ಪಿ ಶ್ರೀಕಂಠ ಶಾಸ್ತ್ರೀ. ಲಿಂಗರಾಜು ಹಾಜರಿದ್ದರು.

Key words: Practical-educational-guidance – SSLC -students – face – exam-mysore

Font Awesome Icons

Leave a Reply

Your email address will not be published. Required fields are marked *