ಏರ್ ಇಂಡಿಯಾಗೆ ₹80 ಲಕ್ಷ ದಂಡ ವಿಧಿಸಿದ ಡಿಜಿಸಿಎ

ನವದೆಹಲಿ: ವಿಮಾನ ಕಾರ್ಯಾಚರಣೆ ಸಮಯದ ಅವಧಿ ಹಾಗೂ ವಿಮಾನ ಸಿಬ್ಬಂದಿಯ ದಣಿವು ನಿರ್ವಹಣೆ ವ್ಯವಸ್ಥೆ ಸಂಬಂಧ ಇರುವ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯವು‌ (ಡಿಜಿಸಿಎ) ಏರ್‌ ಇಂಡಿಯಾಗೆ ₹80 ಲಕ್ಷ ದಂಡ ವಿಧಿಸಿದೆ.

ಜನವರಿಯಲ್ಲಿ ಏರ್‌ಇಂಡಿಯಾದ ಸ್ಪಾಟ್ ಆಡಿಟ್‌ ನಡೆಸಿದ್ದ ಡಿಜಿಸಿಎ, ಸಾಕ್ಷ್ಯಗಳನ್ನು ಹಾಗೂ ವರದಿಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಂಡಿದೆ. 60 ವರ್ಷಕ್ಕೂ ಮೇಲ್ಪಟ್ಟ ಇಬ್ಬರು ಪೈಲಟ್‌ಗಳು ಏಕಕಾಲದಲ್ಲಿ ವಿಮಾನ ಹಾರಿಸಿರುವ ಕೆಲವು ಘಟನೆಗಳು ಸಾಕ್ಷ್ಯಗಳು ಹಾಗೂ ವರದಿಗಳ ವಿಶ್ಲೇಷಣೆಯಲ್ಲಿ ಗೊತ್ತಾಗಿದೆ. ಸಿಬ್ಬಂದಿಗಳಿಗೆ ಅಗತ್ಯ ವಿಶ್ರಾಂತಿ, ದೂರದ ಪ್ರಯಾಣದ ಮುನ್ನ ಹಾಗೂ ಬಳಿಕ ನಿಡಬೇಕಿದ್ದ ವಿಶ್ರಾಂತಿ ಹಾಗೂ ಲೇ ಓವರ್ (ಪ್ರಯಾಣದ ನಡುವೆ ವಿಮಾನ ಬದಲಿಸುವಾಗ ಇರುವ ಸಮಯ) ಸಮಯದಲ್ಲಿ ನೀಡಬೇಕಿದ್ದ ವಿಶ್ರಾಂತಿ ನೀಡುವಲ್ಲಿ ಕೊರತೆ ಕಂಡು ಬಂದಿದೆ. ಇದು ನಿಯಮಗಳ ಉಲ್ಲಂಘನೆ ಎಂದು ಡಿಜಿಸಿಎ ಪ್ರಕಟಣೆಯಲ್ಲಿ ತಿಳಿಸಿದೆ.

Font Awesome Icons

Leave a Reply

Your email address will not be published. Required fields are marked *