ಏರ್ ಗನ್‌ನ್ನು ಆಟಿಕೆ ಎಂದು ಬಾಲಕನ ಆಟ ; ಮಿಸ್ ಫೈರ್ ಆಗಿ ಸಾವು

ಚಿಕ್ಕಮಗಳೂರು: 8 ವರ್ಷದ ಬಾಲಕನೊಬ್ಬ ಆಟವಾಡುವ ಗನ್ ಎಂದು ಅಂದುಕೊಂಡು ಏರ್‌ ಗನ್‌ ಇಟ್ಟುಕೊಂಡು ಆಡುವಾಗ ಬಾಲಕ ಟ್ರಿಗರ್‌ ಒತ್ತಿದ್ದು, ಮಿಸ್‌ ಫೈರ್‌ ಆಗಿ ತನ್ನ ಎದೆಗೇ ಸ್ವಯಂ ಸಿಡಿಸಿಕೊಂಡಿದ್ದಾನೆ. ಇದರಿಂದ ಆಘಾತಕ್ಕೊಳಗಾಗಿ ಮೃತಪಟ್ಟಿದ್ದಾನೆ. ಪೋಷಕರ ನಿರ್ಲ್ಯಕ್ಷದಿಂದ ಒಂದು ಜೀವ ಬಲಿಯಾಗಿದೆ.

ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಹಕ್ಕಿ-ಪಿಕ್ಕಿ ತಾಂಡಾದಲ್ಲಿ ಘಟನೆ ನಡೆದಿದೆ. ವಿಷ್ಣು ರಾಜ್ (8) ಮೃತ ಬಾಲಕ. ಏರ್ ಗನ್ ಮಿಸ್ ಫೈರ್ ಆಗಿದ್ದು, ಬಾಲಕನ ಎದೆಯ ಭಾಗಕ್ಕೆ ಗುಂಡು ಸಿಡಿದಿದೆ. ಹೀಗಾಗಿ ಬಾಲಕ ದುರ್ಮರಣಕ್ಕೀಡಾಗಿದ್ದಾನೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Font Awesome Icons

Leave a Reply

Your email address will not be published. Required fields are marked *