ಮಂಗಳೂರು: ಈದುಲ್ ಫಿತ್ರ್ ಹಿನ್ನೆಲೆಯಲ್ಲಿ ಏ.10ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ರಜೆ ಘೋಷಿಸಲಾಗಿದೆ.
ನಿಗದಿತ ಪರೀಕ್ಷೆಗಳು ಬಿಟ್ಟು, ಉಳಿದಂತೆ ಸರಕಾರಿ ಕಚೇರಿಗಳು ಮುಚ್ಚಿರುತ್ತವೆ. ಏ.11ರಂದು ಕರ್ತವ್ಯದ ದಿನವಾಗಿರುತ್ತದೆ.
ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಅವರ ಮನವಿಯಂತೆ ಸರಕಾರದ ಅಧೀನ ಕಾರ್ಯದರ್ಶಿ ವಿಜಯ ಕುಮಾರ್ ಎಚ್.ಬಿ. ಆದೇಶ ಹೊರಡಿಸಿದ್ದಾರೆ.