ಐದು ಗ್ಯಾರಂಟಿಯ ‘ಕೊರಮ್ಮ’ ತುಳು ಚಲನಚಿತ್ರ

ಮಂಗಳೂರು: ಐದು ಗ್ಯಾರಂಟಿಯೊಂದಿಗೆ ಬೆಳ್ಳಿತೆರೆಯಲ್ಲಿ ಕೊರಮ್ಮ ತುಳು ಚಲನಚಿತ್ರ ಮೂಡಿಬರಲಿದೆ ಎಂದು ಚಿತ್ರನಿರ್ದೇಶಕ ಶಿವಧ್ವಜ್‌ ಶೆಟ್ಟಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರ ನಿರ್ದೇಶಕ ಶಿವಧ್ವಜ್ ಶೆಟ್ಟಿ ಮಾತನಾಡಿ ತುಳುನಾಡ ಸಂಸ್ಕೃತಿ ಆಚಾರ-ವಿಚಾರ, ನಡೆ-ನುಡಿ, ಜೀವನ ಪದ್ಧತಿ, ಇವೆಲ್ಲವುಗಳೊಂದಿಗೆ ಮನೋರಂಜನೆಯನ್ನು ಬೆರಸಿಕೊಂಡು ಕುತೂಹಲ ಹುಟ್ಟಿಸುವ ಕಥೆ ಹೆಣೆದು ಸುಂದರವಾಗಿ ಮಾಡಿರುವ ತುಳು ಸಿನೆಮಾ ಕೊರಮ್ಮ ಇಂದಿನ ಯುವ ಜನತೆಯನ್ನು ಬೆರಗುಗೊಳಿಸುವಂತೆ ಮಾಡುವ ಈ ಚಲನಚಿತ್ರ ಇದೇ ಆಗಸ್ಟ್ 11ರ ಶುಕ್ರವಾರದಂದು ಮಂಗಳೂರು, ಸುರತ್ಕಲ್, ಪುತ್ತೂರು, ಪಡುಬಿದ್ರೆ, ಮುಂತಾದ ಕಡೆಗಳಲ್ಲಿ ಬಿಡುಗಡೆಯಾಗಲಿದೆ.

ಸಭೈ‌ ಪ್ರೊಡಕ್ಷನ್ ಹೌಸ್‌ ನಿರ್ಮಾಣ ಸಂಸ್ಥೆಯ ಮೂಲಕ ಅಡ್ವಾರು ಮಾಧವ ನಾಯ್ಕ ಅರ್ಪಿಸಿರುವ ಈ ಚಿತ್ರದ ಹಾಡಿನ ದೃಶ್ಯದಲ್ಲಿ ತುಳುನಾಡಿನ ಪೂರ್ವಜರ ಬದುಕು ಮಾರ್ಮಿಕವಾಗಿ ಪ್ರತಿಬಿಂಬಿತವಾಗಿದೆ. ತುಳುವರ ಹಿರಿಯರ ಕಾಲದ ಪರಿಕರಗಳನ್ನು ಸಮರ್ಥವಾಗಿ ಬಳಸಿಕೊಂಡು ಮಾಡಿರುವ ಈ ಸಿನೆಮಾದ ಕಥೆ-ಚಿತ್ರಕಥೆ-ನಿರ್ದೇಶನವನ್ನು ರಾಷ್ಟ್ರ ಪ್ರಶಸ್ತಿ ಚಿತ್ರ ನಿರ್ದೇಶಕ ಶಿವಧ್ವಜ್ ಶೆಟ್ಟಿ ಮಾಡಿದ್ದಾರೆ.

ನಿರ್ಮಾಪಕರು ಈಶ್ವವಿದಾಸ್ ಶೆಟ್ಟಿ ಮತ್ತು ರಾಜೇಶ್ವರಿ, ಸಂಗೀತ ಶಿನೋಯ್ ವಿ. ಜೋಸೆಫ್, ಛಾಯಾಗ್ರಹಣ ಸುರೇಶ್ ಬೈರಸಂದ್ರ, ಸಂಕಲನ, ಗಣೇಶ್‌, ನೀರ್ಚಾಲ್, ಸಂಭಾಷಣೆ ಶ್ರೀನಿಧಿ ಭಟ್, ಸಾಹಿತ್ಯ ಕೆ. ಮಹೇಂದ್ರನಾಥ್ ಸಾಲೆತ್ತೂರು ಸಂತೋಷ ಪೂಜಾರಿ ವೇಣೂರು, ಸಹ ನಿರ್ದೇಶನ ಹರ್ಷೀವ್ ಭಗೀರ, ಪ್ರಸಾಧನ ಕುಮಾರ್ ನೊಣವಿನಕೆರೆ, ನಿರ್ಮಾಣ-ನಿರ್ವಹಣೆ ವೀರೇಶ್ ಎಸ್.ಎ, ಹಂಚಿಕೆದಾರರು ದೀಪಕ್’ ಸಿನಿ ಗ್ಯಾಲಕ್ಷ್ಮಿ, ಪತ್ರಿಕಾ ಪ್ರಚಾರದ ಜವಾಬ್ದಾರಿಯನ್ನು ಜಗನ್ನಾಥ ಶೆಟ್ಟಿ ಬಾಳ ಹೊತ್ತುಕೊಂಡಿದ್ದಾರೆ.

ಕಾರ್ಕಳದ ಬೈಲೂರಿನ ಸುಂದರ ಕಾಣದಲ್ಲಿ ಒಂದೇ ಹಂತದಲ್ಲಿ ಚಿತ್ರೀಕಣವಾಗಿರುವ ಈ ” ಕೊರಮ್ಮ” ತುಳುಚಿತ್ರದ ತಾರಾಗಣದಲ್ಲಿ – ಗುರುಪ್ರಸಾದ್ ಹೆಗ್ಡೆ, ರೂಪ ಶ್ರೀ ವರ್ಕಾಡಿ, ಮೋಹನ್ ಶೇಣಿ, ಒಂದು ರಕ್ಷದಿ, ಜಿನಪ್ರಸಾದ್, ದಿವ್ಯ ಶ್ರೀ ನಾಯಕ್, ಲಕ್ಷಣ್ ಕುಮಾರ್‌ ಮಲ್ಲೂರು, ನಮಿತಾ ಕೂಳೂರು, ಸುಮನ ಮಂಗಳೂರು, ಹರೀಶ್ ಜೋಡು ರಸ್ತೆ, ಮತ್ತಿತರರು ನಟಿಸಿರುತ್ತಾರೆ.

ತುಳು ಚಿತ್ರರಂಗಕ್ಕೆ ಬದಲಾವಣೆ ಕೊಡಬಲ್ಲ ಮೌಲ್ಯಯುತವಾದ ಕಥಾವಸ್ತುವಿನ ಕೊರಮ್ಮ ಚಲನಚಿತ್ರವನ್ನು ಬಹು ಸಂಖ್ಯೆಯಲ್ಲಿ ಜನರು ಚಿತ್ರಮಂದಿರಕ್ಕೆ ಬಂದು ನೋಡುವಂತೆ ಚಿತ್ರತಂಡ ವಿನಂತಿ ಮಾಡಿದೆ. ಪತ್ರಿಕಾಗೋಷ್ಟಿಯ ಸಭೆಯಲ್ಲಿ – ಶಿವಧ್ವಜ್ ಶೆಟ್ಟಿ, ಈಶ್ವರಿದಾಸ್‌ ಶೆಟ್ಟಿ, ಆಡ್ವಾರು ಮಾಧವ ನಾಯ್ಕ, ದೀಪಕ್, ಗುರುಪ್ರಸಾದ್‌ ಹೆಗ್ಡೆ, ಮೋಹನ್ ಶೇಣಿ, ಲಕ್ಷ್ಮಣ್ ಕುಮಾರ್ ಮಲ್ಲೂರು, ಒಂದು ದಕ್ಷಿಣ, ರೂಪ ಶ್ರೀ ವರ್ಕಾಡಿ ಮತ್ತಿತರರು ಇದ್ದರು.

Font Awesome Icons

Leave a Reply

Your email address will not be published. Required fields are marked *