ಐಪಿಎಲ್ 2024: ಭರ್ಜರಿ ಮೊತ್ತಕ್ಕೆ ಮಾರಾಟವಾದ ‌ಸ್ಪೋಟಕ ಬ್ಯಾಟರ್

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್ 17 ಹರಾಜು ಪ್ರಕ್ರಿಯ ಶುರುವಾಗಿದೆ. ವೆಸ್ಟ್ ಇಂಡೀಸ್​ನ ಸ್ಪೋಟಕ ದಾಂಡಿಗ ರೋವ್​ಮನ್ ಪೊವೆಲ್ ಈ ಬಾರಿಯ ಹರಾಜಿನಲ್ಲಿ ಮೊದಲು ಬಿಕರಿಯಾದ ಆಟಗಾರ.

2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಪೊವೆಲ್ ಖರೀದಿಗೆ ಕೆಕೆಆರ್​ ಆಸಕ್ತಿ ವಹಿಸಿತ್ತು. ಅದರಂತೆ ಶುರುವಾದ ಬಿಡ್ಡಿಂಗ್​ನಲ್ಲಿ ಕೆಕೆಆರ್​ಗೆ ಪ್ರತಿಸ್ಪರ್ಧಿಯಾಗಿ ರಾಜಸ್ಥಾನ್ ರಾಯಲ್ಸ್​ ಮುಂದಾಯಿತು.

ಕೆಕೆಆರ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಪೈಪೋಟಿಯಿಂದಾಗಿ ಆರಂಭದಲ್ಲೇ ಪೊವೆಲ್ ಮೌಲ್ಯ 5 ಕೋಟಿ ದಾಟಿತು. ಅಂತಿಮವಾಗಿ 7.40 ಲಕ್ಷ ರೂ. ನೀಡುವ ಮೂಲಕ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಪೊವೆಲ್ ಅವರನ್ನು ಖರೀದಿಸಿದೆ.

ಕಳೆದ ಸೀಸನ್​ನಲ್ಲಿ ರೋವ್​ಮನ್ ಪೊವೆಲ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ಮಧ್ಯಮ ಕ್ರಮಾಂಕದ ಬಲಿಷ್ಠ ಬ್ಯಾಟರ್ ಎನಿಸಿಕೊಂಡಿರುವ ಪೊವೆಲ್ ಡೆಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇದಾಗ್ಯೂ ಕ್ಯಾಪಿಟಲ್ಸ್​ ಫ್ರಾಂಚೈಸಿ ವಿಂಡೀಸ್ ದಾಂಡಿಗನನ್ನು ಬಿಡುಗಡೆ ಮಾಡಿತ್ತು. ಇದೀಗ ಹರಾಜಿನ ಮೂಲಕ ರೋವ್​ಮನ್ ಪೊವೆಳ್ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ.‌

Font Awesome Icons

Leave a Reply

Your email address will not be published. Required fields are marked *