ಐಶ್ವರ್ಯಾ ರೈ ಅವರನ್ನು ಅನ್​ಫಾಲೋ ಮಾಡಿದ ಅಮಿತಾಭ್ ಬಚ್ಚನ್

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬೆನ್ನಲ್ಲೇ ಇನ್​ಸ್ಟಾಗ್ರಾಮ್​ನಲ್ಲಿ ಐಶ್ವರ್ಯಾ ರೈ ಅವರನ್ನು ಅಮಿತಾಭ್ ಅವರು ಅನ್​ಫಾಲೋ ಮಾಡಿದ್ದಾರೆ.

ಸಲ್ಮಾನ್ ಖಾನ್, ಅಭಿಷೇಕ್ ಬಚ್ಚನ್, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ವಿರಾಟ್ ಕೊಹ್ಲಿ, ಶ್ವೇತಾ ಬಚ್ಚನ್ ನಂದಾ ಮತ್ತು ನವ್ಯಾ ನವೇಲಿ ನಂದಾ ಸೇರಿದಂತೆ ಅಮಿತಾಭ್ ಇನ್‌ಸ್ಟಾಗ್ರಾಮ್‌ನಲ್ಲಿ ಒಟ್ಟು 74 ಜನರನ್ನು ಫಾಲೋ ಮಾಡುತ್ತಿದ್ದರು. ಇದೀಗ ಏಕಾಏಕಿ ಅನ್‌ಫಾಲೋ ಮಾಡುತ್ತಿದ್ದಾರೆ. ಐಶ್ವರ್ಯಾ ಕೂಡ ಅಭಿಷೇಕ್ ಬಚ್ಚನ್ ಅವರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.

ಮುಂಬೈನಲ್ಲಿ ನಡೆದ ಅಗಸ್ತ್ಯ ನಂದಾ ಅವರ ಚೊಚ್ಚಲ ಚಲನಚಿತ್ರ ʻದಿ ಆರ್ಚೀಸ್‌ʼ ವಿಶೇಷ ಪ್ರದರ್ಶನದಲ್ಲಿ ಇಡೀ ಬಚ್ಚನ್ ಕುಟುಂಬ ಭಾಗಿಯಾಗಿತ್ತು. ಮೂಲಗಳ ಪ್ರಕಾರ ಅಗಸ್ತ್ಯ ನಂದಾ ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ಕೊಡುವಾಗ ಐಶ್ವರ್ಯಾ ರೈ ಅವರು ಅಗಸ್ತ್ಯ ಅವರಿಗೆ ನಗುತ್ತಲೇ ಟೀಕೆ ಮಾಡಿದ್ದರಂತೆ. ‘ನೀನು ಕ್ಯಾಮೆರಾ ಫೇಸ್ ಮಾಡೋದು ಕಲಿಯಬೇಕು’ ಎಂದು ಹೇಳಿದ್ದರು. ಈ ವಿಡಿಯೊ ಸಾಕಷ್ಟು ವೈರಲ್ ಆಗಿತ್ತು. ಈ ಕಾರಣದಿಂದಲೇ ಅಮಿತಾಭ್ ಅವರು ಐಶ್ವರ್ಯಾ ಅವರನ್ನು ಅನ್​ಫಾಲೋ ಮಾಡಿದ್ದಾರೆ ಎಂದು ಊಹಿಸಲಾಗಿದೆ.

Font Awesome Icons

Leave a Reply

Your email address will not be published. Required fields are marked *