ಒಂದು ವೈರಲ್ ಹೇಳಿಕೆಯಿಂದ ಜೀವನವೇ ಚೇಂಜ್; ಡೋಲೋ ೬೫೦ ಖ್ಯಾತಿಯ ಶಶಿರೇಖಾ ಈಗ ಸಿನಿಮಾಗೆ ಎಂಟ್ರಿ

ಬೆಂಗಳೂರು: ಕೊರೋನಾ ಕಾಲದಲ್ಲಿ ಡೋಲೋ ೬೫೦ ಮತ್ತು ಬಿಸಿ ರಾಗಿಮುದ್ದೆ ತಿಂದ್ರೆ ಸಾಕು ಎಂದು ಹೇಳಿ ವೈರಲ್ ಆಗಿದ್ದ ಶಶಿರೇಖಾ ಈಗ ಚಿತ್ರವೊಂದರಲ್ಲಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಶಶಿರೇಖಾ ಪಾಲಿಗೆ ಒಲಿದಿರುವ ʼಸೌಜನ್ಯʼ ಹೆಸರಿನ ಸಿನಿಮಾಗೆ ʼಇದು ಆರಂಭ ಮಾತ್ರ, ಅಂತ್ಯವಲ್ಲʼ ಎಂಬ ಅಡಿಬರಹವಿದ್ದು, ಚೀತನ್ ದೇವರಾಜ್ ಅವರು ಕಥೆ, ಚಿತ್ರಕಥ ಹಾಗು ನಿರ್ದೇಶನ ಮಾಡುತ್ತಿದ್ದಾರೆ. ದೋಸ್ತಿ ಕ್ರಿಯೇಷನ್ಸ್‌ ನಿರ್ಮಾಣದ ಹೊಣೆ ಹೊತ್ತಿದೆ.

ಕೊರೋನಾ ಓಡಿಸಲು ಡೋಲೋ ೬೫೦ ಮಾತ್ರೆ, ಬಿಸಿ ರಾಗಿ ಮುದ್ದೆ ತಿಂದ್ರೆ ಸಾಕು ಎಂದಿದ್ದ ಶಶಿರೇಖಾ ಅಂದಿನಿಂದ ಡೋಲೋ ೬೫೦ ಎಂದೇ ಕರೆಯಲ್ಪಡುತ್ತಿದ್ದರು. ಇದನ್ನು ಬಳಸಿಕೊಂಡ ಅವರು ಸಾಮಾಜಿಕ ಜಾಲತಾಣಕ್ಕೆ ಪ್ರವೇಶ ಕೊಟ್ಟು ಯೂಟ್ಯೂಬ್ ಹಾಗು ಇನ್ಸ್ಟಾಗ್ರಾಮ್ ಗಳಲ್ಲಿ ಸಕ್ರಿಯರಾಗಿದ್ದಾರೆ. ಪ್ರಸ್ತುತ ಇನ್ಸ್ಟಾಗ್ರಾಮಿನಲ್ಲಿ ೧.೭೫ ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ.

Font Awesome Icons

Leave a Reply

Your email address will not be published. Required fields are marked *