ಒತ್ತುವರಿ ತೆರವು ಭೂಮಿಯನ್ನು ಭೂರಹಿತ ದಲಿತರಿಗೆ ಮಂಜೂರು ಮಾಡುವಂತೆ ಮನವಿ

ಚಿಕ್ಕಮಗಳೂರು: ತಾಲ್ಲೂಕು ಆಡಳಿತ ಗೋಮಾಳ ಮತ್ತು ಕಾಫಿ ಖರಾಬು ಹೆಚ್ಚುವರಿ ಜಮೀನನ್ನು ಬಹು ಜಮೀನು ಒತ್ತುವರಿದಾರರಿಂದ ತೆರವುಗೊಳಿಸಿದ್ದು, ಈ ಜಮೀನನ್ನು ಭೂರಹಿತದಲಿತರಿಗೆ ಕಾಯ್ದಿರಿಸಿ ಮಂಜೂರು ಮಾಡುವಂತೆಜಿಲ್ಲಾಧಿಕಾರಿ ಮೀನಾ ನಾಗರಾಜ್‌ರವರಿಗೆ ಕರ್ನಾಟಕದಲಿತ ಸಂಘರ್ಷ ಸಮಿತಿವತಿಯಿಂದ ಮನವಿ ನೀಡಿದರು.

ಕರ್ನಾಟಕದಲಿತ ಸಂಘರ್ಷ ಸಮಿತಿಯರಾಜ್ಯ ಸಂಘಟನಾ ಸಂಚಾಲಕರಾದತರೀಕೆರೆಎನ್.ವೆಂಕಟೇಶ್ ಮನವಿ ನೀಡಿ ಮಾತನಾಡಿ, ಎನ್.ಆರ್ ಪುರತಾಲ್ಲೂಕಿನ ಕಸಬಾ ಹೋಬಳಿ ಸೂಸಲವಾನಿ ಗ್ರಾಮದ ಸರ್ವೇ ನಂ ೩೨/೨ ರಲ್ಲಿ ಗೋಮಾಳ ಮತ್ತು ಕಾಫಿ ಖರಾಬು ಹೆಚ್ಚುವರಿ ಜಮೀನನ್ನು ಬಹು ಜಮೀನು ಒತ್ತುವರಿದಾರರಿಂದ ತೆರವುಗೊಳಿಸಿದ್ದು, ಈ ಜಮೀನುನ ಭೂರಹಿತ ದಲಿತರಿಗೆ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದರು.

ಇದೇ ಸರ್ವೆ ನಂಬರ್‌ನಲ್ಲಿ ೨೦-೦.೮ ಎಕರೆ ಸರ್ಕಾರಿ ಜಮೀನನ್ನು ಭೂಮಾಲೀಕರು ಅತಿಕ್ರಮವಾಗಿ ಸರ್ಕಾರಿ ಕಂದಾಯ ಭೂಮಿಯನ್ನು ಹೊಂದಿರುವ ಬಗ್ಗೆ ಪರಿಶೀಲಿಸಿದ ತಾಲೂಕು ಆಡಳಿತ ತೆರವುಗೊಳಿಸಿದ್ದು, ಇದೇ ಭೂಮಿಯನ್ನು ಬಡ ಭೂರಹಿತ ದಲಿತರಿಗೆ ಕೃಷಿ ಸಾಗುವಳಿಗಾಗಿ ಮತ್ತು ನಿವೇಶನಕ್ಕಾಗಿ ಕಾಯ್ದಿರಿಸಿ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಎನ್.ಆರ್ ಪುರ ತಾಲೂಕಿನಾದ್ಯಂತ ಇಂತಹ ಭೂ ಕಬಳಿಕೆಯ ಸಮಸ್ಯೆಗಳಿದ್ದು, ಉಳ್ಳವರು ಭೂಕಬಳಿಕೆ ಮಾಡುತ್ತಿದ್ದಾರೆ.ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಾದ ತಾವು ತಾಲೂಕು ದಂಡಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿತ್ವರಿತವಾಗಿ ಸ್ಥಳ ಪರಿಶೀಲಿಸಿ ಸರ್ವೆ ಮಾಡಿಸಿ ದಲಿತರಿಗೆ ಭೂಮಂಜೂರಾತಿ ನೀಡಬೇಕೆಂದು ಮನವಿ ಮಾಡಿದ್ದಾರೆ.

ವಿಳಂಭವಾದರೆ ನಮ್ಮ ಸಂಘಟನೆಯಿಂದ ಭೂರಹಿತ ದಲಿತರಿಗೆ ಭೂಮಿ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿದಸಂಸರಾಜ್ಯ ಸಂಘಟನಾ ಸಂಚಾಲಕರಾದ ಎಂ.ವಿಭವಾನಿ, ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ರಾಜೇಶ್, ಮೃತ್ಯುಂಜಯ, ಅಬ್ದುಲ್‌ರೆಹಮನ್, ತಾಲೂಕು ಸಂಘಟನಾ ಸಂಚಾಲಕ ಬಿ.ಆರ್ ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *