ಓಮಿಕ್ರಾನ್ ರೂಪಾಂತರಿ ತಳಿ JN.1 ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ-ಮೈಸೂರು ಡಿಎಚ್ ಒ- ಡಾ ಪಿ.ಸಿ ಕುಮಾರಸ್ವಾಮಿ. – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್




ಮೈಸೂರು,ಡಿಸೆಂಬರ್,26,2023(www.justkannada.in): ಓಮಿಕ್ರಾನ್ ರೂಪಾಂತರಿ ತಳಿ JN.1 ಬಗ್ಗೆ ಜನರು ಆತಂಕ ಪಡುವ ಅಗತ್ಯ ಇಲ್ಲ. ಹೊಸ ತಳಿ ಜನರ ಆರೋಗ್ಯದ ಮೇಲೆ ಅಷ್ಟೊಂದು ಗಂಭೀರ ಪರಿಣಾಮ ಬೀರುವುದಿಲ್ಲ ಎಂದು ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಪಿ.ಸಿ ಕುಮಾರಸ್ವಾಮಿ ಮಾಹಿತಿ ನೀಡಿದರು.

ಇಂದು ಮಾತನಾಡಿದ ಮೈಸೂರು ಡಿ.ಎಚ್ ಒ ಕುಮಾರಸ್ವಾಮಿ, ಕಿಡ್ನಿ ಸಮಸ್ಯೆ, ಸಕ್ಕರೆ ಕಾಯಿಲೆ, ಶ್ವಾಸಕೋಶ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಎಚ್ಚರಿಕೆ ವಹಿಸಬೇಕು. ಸೋಂಕಿನ‌ ಲಕ್ಷಣ ಕಂಡು ಬಂದವರು ಹೋಂ ಐಸೋಲೇಷನ್ ನಲ್ಲಿ ಇರಬೇಕು. ಮಾಸ್ಕ್ ಧರಿಸುವ ಮೂಲಕ‌ ಸೋಂಕು ಮತ್ತೊಬ್ಬರಿಗೆ ಹರಡಂತೆ ಜಾಗೃತಿ ವಹಿಸಬೇಕು. ಅಗತ್ಯ ಚಿಕಿತ್ಸೆಗಾಗಿ ತಮ್ಮ ಸಮೀಪದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಈ ಬಗ್ಗೆ ಅನಗತ್ಯ ಭಯ, ಆತಂಕ ಪಡುವ ಅಗತ್ಯ ಇಲ್ಲ ಎಂದು ತಿಳಿಸಿದರು.

ಕೋವಿಡ್ ಹರಡದಂತೆ ತಡೆಯಲು ಮೈಸೂರು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಔಷಧಿಗಳ ದಾಸ್ತಾನು ಸಾಕಷ್ಟು ಇದೆ. ಗ್ರಾ.ಪಂ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೂ ತಪಾಸಣೆ ‌ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಸೂಚನೆ ನೀಡಲಾಗಿದೆ. ಜಿಲ್ಲಾ ಮಟ್ಟದ ಸಭೆಯನ್ನು ಕೂಡ ಮಾಡಲಾಗಿದ್ದು, ಕೇರಳ ಗಡಿ ಭಾಗ ಬಾವಲಿ ಚೆಕ್ ಪೋಸ್ಟ್ ನಲ್ಲೂ ಹೆಚ್ಚಿನ ನಿಗಾ ವಹಿಸಲಾಗಿದೆ. ಸರ್ಕಾರ ನೀಡುವ ಮಾರ್ಗ ಸೂಚಿ ಅನ್ವಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮೈಸೂರಿನಲ್ಲಿ ಸದ್ಯ ಹೊಸ ರೂಪಾಂತರಿ ತಳಿ 4 ಕೇಸ್ ಪತ್ತೆಯಾದರೆ ಪಕ್ಕದ ಮಂಡ್ಯದಲ್ಲಿ 3 ಕೇಸ್, ಚಾಮರಾಜನಗರದಲ್ಲಿ 1 ಕೇಸ್ ಪತ್ತೆಯಾಗಿವೆ. ಸರ್ಕಾರದ ಮಾರ್ಗಸೂಚಿಯನ್ನ ನಾವು ಕಡ್ಡಾಯವಾಗಿ ಅನುಸರಿಸುತ್ತಿದ್ದೇವೆ. ಇದಕ್ಕಾಗಿ ಪ್ರತ್ಯೇಕ ಔಷಧಿಗಳ ಅಗತ್ಯ ಇಲ್ಲ. ಸರ್ಕಾರ ಆಸ್ಪತ್ರೆಯಲ್ಲಿ ಈಗಾಗಲೇ ಎಲ್ಲಾ ರೀತಿ ಔಷಧಿಗಳ ದಾಸ್ತಾನು ಇದೆ. ಜನರು ಈ ಬಗ್ಗೆ ಆತಂಕ, ಗಾಬರಿ ಆಗುವ ಅಗತ್ಯ ಇಲ್ಲ ಎಂದು ಡಿಎಚ್ ಒ ಡಾ ಪಿ.ಸಿ ಕುಮಾರಸ್ವಾಮಿ ತಿಳಿಸಿದರು.

Key words: Mysore DHO- PC Kumaraswamy – No need – worry – Omicron- JN.1






Previous article1400 new electric BMTC buses to be inducted by next April-CM Siddaramaiah


Font Awesome Icons

Leave a Reply

Your email address will not be published. Required fields are marked *