ಕಕ್ಷೆ ಸೇರಿದ ಎಕ್ಸ್‌ಪೊಸ್ಯಾಟ್ ಉಪಗ್ರಹ: ವಿಡಿಯೊ ಹಂಚಿಕೊಂಡ ಇಸ್ರೊ

ಶ್ರೀಹರಿಕೋಟಾ: ಎಕ್ಸ್‌-ರೇ ಮೂಲಗಳ ನಿಗೂಢತೆ ಹಾಗೂ ಕಪ್ಪುರಂಧ್ರದ ನಿಗೂಢ ಜಗತ್ತಿನ ವಿಸ್ಮಯಗಳನ್ನು ತಿಳಿಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಮಿತ ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹವನ್ನು (ಎಕ್ಸ್‌ಪೊಸ್ಯಾಟ್) ಇಂದು ಯಶಸ್ವಿಯಾಗಿ ಉಡ್ಡಯನ ಮಾಡಿದೆ. PSLV-C58 ರಾಕೆಟ್ ಹೊತ್ತೊಯ್ದ ಎಕ್ಸ್‌ಪೊಸ್ಯಾಟ್ ಉಪಗ್ರಹ ಕಕ್ಷೆಗೆ ಸೇರಿದೆ.

ರಾಕೆಟ್‌ ‘ಎಕ್ಸ್‌ಪೋಸ್ಯಾಟ್’ ಉಪಗ್ರಹವನ್ನು ಕಕ್ಷೆಗೆ ಹೇಗೆ ಸೇರಿಸಿದೆ ಎಂಬ ವಿಡಿಯೊವನ್ನು ಇಸ್ರೊ ಎಕ್ಸ್‌ನಲ್ಲಿ ಹಂಚಿಕೊಂಡಿದೆ.ಆಂಧ್ರದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಇಂದು ಬೆಳಿಗ್ಗೆ 9.10ಕ್ಕೆ ‘ಎಕ್ಸ್‌ಪೊಸ್ಯಾಟ್’ ಸೇರಿದಂತೆ ವಿದ್ಯಾಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಸಂಬಂಧಿಸಿದ ಇತರೆ 9 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ವಾಹಕವು ಗಗನಕ್ಕೆ ಚಿಮ್ಮಿದೆ.

Font Awesome Icons

Leave a Reply

Your email address will not be published. Required fields are marked *