ಹುಬ್ಬಳ್ಳಿ: ಕರಸೇವಕ ಶ್ರೀಕಾಂತ ಪೂಜಾರಿ ಜಾಮೀನು ಅರ್ಜಿ ವಿಚಾರಣೆ ಸದ್ಯ ಹುಬ್ಬಳ್ಳಿ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ವಾದ ವಿವಾದ ಆಲಿಸಿ ತೀರ್ಪು ಕಾಯ್ದಿರಿಸಿದ ನ್ಯಾಯಾಧೀಶರು ನಾಳೆಗೆ (ಶುಕ್ರವಾರಕ್ಕೆ) ಮುಂದೂಡಿದ್ದಾರೆ.
ಆರೋಪಿ ಶ್ರೀಕಾಂತ ಪೂಜಾರಿ ಪರ ಸಂಜೀವ ಬಡಸ್ಕರ ವಾದ ಮಂಡನೆ ನಡೆಸಿದ್ದು, ಶ್ರೀಕಾಂತ ಪೂಜಾರಿ 1992 ಗಲಭೆಯಲ್ಲಿ, ಹಜರೇಸಾಬ್ ಎಂಬುವರಿಗೆ ಸೇರಿದ್ದ ಅಡಿಕೆ ಅಂಗಡಿ ಬೆಂಕಿ ಹಚ್ಚಿದ ಆರೋಪದಡಿ, ಜಾಮೀನು ಪಡೆದ ನಂತರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.
ಶ್ರೀಕಾಂತಗೆ ವಾರಂಟ್ ಹೊರಡಿಸಿದ್ದ ನ್ಯಾಯಾಲಯ, 31 ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸಿದ್ದ ಶಹರ ಠಾಣೆ ಪೊಲೀಸರು ಈಗ ಆರೋಪಿ ಶ್ರೀಕಾಂತ ಪೂಜಾರಿ ಜಾಮೀನನ್ನು ಮಾನ್ಯ ನ್ಯಾಯಾಧೀಶರು ನಾಳೆಗೆ ಮುಂದೂಡಿದ್ದಾರೆ.