ಕಲೆಕ್ಷನ್‌ ನಲ್ಲಿ ಕಮಾಲ್‌ ಮಾಡಿದ ಅನಿಮಲ್‌

ಹೈದರಾಬಾದ್: ಚಿತ್ರರಂಗದಲ್ಲಿ ರಣಬೀರ್‌ ನಟನೆಯ ಅನಿಮಲ್‌ ಚಿತ್ರ ಭರ್ಜರಿ ಕಮಾಲ್‌ ಮಾಡುತ್ತಿದೆ. ಟಾಲಿವುಡ್‌ ನಿರ್ದೇಶಕ ಸಂದೀಪ್‌ ವಂಗಾ ʼಅನಿಮಲ್‌ʼ ಮೂಲಕ ಪ್ಯಾನ್‌ ಇಂಡಿಯಾದಲ್ಲಿ ಮೋಡಿ ಮಾಡಿದ್ದಾರೆ.

ತಂದೆ – ಮಗನ ಎಮೋಷನಲ್‌ ಅಂಶಗಳನ್ನು ಇಟ್ಟುಕೊಂಡು ಮಾಸ್‌ ಆಗಿ ಸ್ಕ್ರೀನ್‌ ಮೇಲೆ ಅದನ್ನು ತೋರಿಸುವ ರೀತಿಗೆ ಹಾಗೂ ರಣ್ಬೀರ್‌ ಕಪೂರ್‌, ಬಾಬಿ ಡಿಯೋಲ್‌ ಅವರ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ರಿಲೀಸ್‌ ಆದ ಮೊದಲ ದಿನ ಸಿನಿಮಾ 61 ಕೋಟಿ ರೂ.ಗಳಿಸಿತ್ತು. ಆ ಮೂಲಕ ಶಾರುಖ್‌ ಖಾನ್‌ ಅವರ ʼಪಠಾಣ್‌ʼ ಹಗೂ ಸನ್ನಿ ಡಿಯೋಲ್‌ ಅವರ ʼಗದರ್‌ -2ʼ ಫಸ್ಟ್‌ ಡೇ ರೆಕಾರ್ಡ್‌ ಬ್ರೇಕ್‌ ಮಾಡಿತ್ತು. ಇದೀಗ ಎರಡನೇ ದಿನದ ಕಲೆಕ್ಷನ್‌ ನಲ್ಲಿ ಮತ್ತೊಂದು ದಾಖಲೆಯನ್ನು ʼಅನಿಮಲ್‌ʼ ಬರೆದಿದೆ. ಎರಡನೇ ದಿನದ ಆರಂಭಿಕ ಅಂದಾಜಿನ ಪ್ರಕಾರ, ಭಾರತದಲ್ಲಿ 63.80 ಕೋಟಿ ಗಳಿಸಿದೆ. ಇದುವರೆಗಿನ ಒಟ್ಟು ಗಳಿಕೆ 129.80 ಕೋಟಿ ರೂ.ಆಗಿದೆ.

Font Awesome Icons

Leave a Reply

Your email address will not be published. Required fields are marked *