ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಶಾರುಖ್ ಖಾನ್ ಮತ್ತು ನಯನತಾರಾ ಅಭಿನಯದ ‘ಜವಾನ್’ ಬಾಕ್ಸ್ ಆಫೀಸ್ನಲ್ಲಿ ಸೂಪರ್ ಹಿಟ್ ಆಗಿದ್ದು ಕಲೆಕ್ಷನ್ ನಲ್ಲಿ ಕಮಾಲ್ ಮಾಡಿದೆ.
ದ್ವಿಪಾತ್ರಗಳಲ್ಲಿ ಎಸ್ಆರ್ಕೆ ನಟಿಸಿರುವ ಈ ಚಿತ್ರವು ಸನ್ನಿ ಡಿಯೋಲ್ ಅಭಿನಯದ ‘ ಹಿಂದಿಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ.’ಜವಾನ್’ ಈಗ ಹಿಂದಿಯಲ್ಲಿ 525.5 ಕೋಟಿ ರೂಪಾಯಿ ಗಳಿಸಿದೆ ಎಂದು ಹಿರಿಯ ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಹೇಳಿದ್ದಾರೆ.
ಬಾಹುಬಲಿ 2’ ಸಿನಿಮಾ 510 ಕೋಟಿ ರೂಪಾಯಿ ಹಣ ಗಳಿಸಿತ್ತು. ಆ ದಾಖಲೆಯನ್ನು ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಇತ್ತೀಚೆಗಷ್ಟೆ ಮುರಿದು 513 ಕೋಟಿ ಹಣ ಗಳಿಸಿತ್ತು. ಅದಾದ ಕೆಲವೇ ದಿನಗಳಲ್ಲಿ ಸನ್ನಿ ಡಿಯೋಲ್ ನಟನೆಯ ‘ಗದರ್ 2’ ಸಿನಿಮಾ 515 ಕೋಟಿ ಗಳಿಸಿ ‘ಪಠಾಣ್’ ಸಿನಿಮಾದ ದಾಖಲೆ ಮುರಿಯಿತು. ಅದಾದ ಕೆಲವೇ ದಿನಗಳಲ್ಲಿ ಮತ್ತೆ ನಂಬರ್ 1 ಸ್ಥಾನವನ್ನು ಶಾರುಖ್ ಖಾನ್ ‘ಜವಾನ್’ ಸಿನಿಮಾ ಮೂಲಕ ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಶಾರುಕ್ ಹೊಸದೊಂದು ದಾಖಲೆ ಮಾಡಿದ್ದಾರೆ.