ಕಲ್ಲುದೊಡ್ಡಿ ಗ್ರಾಮದ ಮನೆಗಳ ಗೋಡೆಯಲ್ಲಿ ‘ಜೈ ಶ್ರೀರಾಮ್’ ಬರಹ

ಚಿಕ್ಕಮಗಳೂರು: ಅಯೋಧ್ಯೆಯ ರಾಮ ಮಂದಿರದಲ್ಲಿ ಶ್ರೀ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಇನ್ನೂ ಕೆಲವೇ ದಿನಗಳಿವೆ. ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸರ್ವಧರ್ಮೀಯರು ಭಾವೈಕ್ಯತೆ ಮೆರೆದಿದ್ದು, ಎಲ್ಲ ಧರ್ಮದವರ ಮನೆ ಗೋಡೆಗಳ ಮೇಲೂ ‘ಜೈ ಶ್ರೀರಾಮ್’ ಗೋಡೆ ಬರಹ  ಕಂಗೊಳಿಸುತ್ತಿದೆ. ಚಿಕ್ಕಮಗಳೂರು ಹೊರವಲಯದ ಶಾಂತಿನಗರ ಕಲ್ಲುದೊಡ್ಡಿ ಗ್ರಾಮದಲ್ಲಿ ‘ಜೈ ಶ್ರೀ ರಾಮ್’ ಫಲಕ ಅಭಿಯಾನ ಆರಂಭಿಸಲಾಗಿದೆ.

ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಧರ್ಮದವರ ಮನೆ ಗೋಡೆಗಳ ಮೇಲೆ ಬರಹ ರಾರಾಜಿಸುತ್ತಿದೆ. ಗೋಡೆ ಬರಹ ಅಭಿಯಾನಕ್ಕೆ ಮುಸ್ಲಿಂ ಯುವಕರು‌ ಕೂಡಾ ಸಾಥ್ ನೀಡಿದ್ದು,   ಅವರ ಮನೆಗಳ ಗೋಡೆಗಳ ಮೇಲೆಯೂ ‘ಜೈ ಶ್ರೀರಾಮ್’ ಎಂಬ ಗೋಡೆ ಬರಹ ಬರೆದಿದ್ದಾರೆ.

ಕ್ರಿಶ್ಚಿಯನ್ ಸಮುದಾಯದವರು ಕೂಡ ಗೋಡೆ ಬರಹ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಶಾಂತಿನಗರ ಕಲ್ಲುದೊಡ್ಡಿಯ ಸುಮಾರು 3500 ಮನೆಗಳ ಗೋಡೆಗಳ ಮೇಲೆ ‘ಜೈ ಶ್ರೀರಾಮ್’ ಗೋಡೆ ಬರಹ ರಾರಾಜಿಸುತ್ತಿದೆ.

Font Awesome Icons

Leave a Reply

Your email address will not be published. Required fields are marked *