ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಜಾನುವಾರು ರಕ್ಷಣೆ

ಗುಂಡ್ಲುಪೇಟೆ: ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು  ಹಿಂದೂಜಾಗರಣ ವೇದಿಕೆ ಕಾರ್ಯಕರ್ತರು ಏಳು ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.

ತಾಲೂಕಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೇಗೂರು ಮಾರ್ಗವಾಗಿ ಕೆಎ 09  – ಸಿ 0111 ನೋಂದಣಿಯ ಅಶೋಕ್ ಲೈಲ್ಯಾನ್ಡ್ ಮಿನಿ ವಾಹನದಲ್ಲಿ ಗೌಪ್ಯವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವೇಳೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಾದ ನಂಜುಂಡ, ಅಣ್ಣಯ್ಯ ಇತರರು ವಾಹನವನ್ನು ಹಿಡಿದಿದ್ದಾರೆ.

ನಂಜನಗೂಡಿನಿಂದ ಗುಂಡ್ಲುಪೇಟೆ  ಕಡೆಗೆ ಹೋಗುವಾಗ ಕಮರಹಳ್ಳಿ ಕ್ರಾಸ್ ಬಳಿ ಏಳು ಜಾನುವಾರುಗಳನ್ನು ಸಾಗಿಸುತ್ತಿದ್ದ ವ್ಯಕ್ತಿ ಮಹಮ್ಮದ್ ರಫಿ  ಎಂದು ತಿಳಿದು ಬಂದಿದ್ದು ಸದ್ಯ  ಬೇಗೂರು ಪೊಲೀಸ್ ರವರಿಂದ ಪ್ರಕರಣ ದಾಖಲಾಗಿದೆ.

Font Awesome Icons

Leave a Reply

Your email address will not be published. Required fields are marked *