ಕಾಮಗಾರಿ ಅಪೂರ್ಣ: ಲೋಕಾಯುಕ್ತ ಪೊಲೀಸರಿಗೆ ದೂರು

ಕಮಲನಗರ: ತಾಲ್ಲೂಕಿನಲ್ಲಿ ನಡೆಯುತ್ತಿರುವ ಜೆಜೆಎಂ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು, ಈ ಸಂಬಂಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವಿಠಲ್ ರಾವ ಪಾಟೀಲ್ ಬಾಲೂರ ತಿಳಿಸಿದ್ದಾರೆ.

ಬಾಲೂರ(ಕೆ) ಗ್ರಾಮದಲ್ಲಿ ಬಳಸುತ್ತಿರುವ ಕೊಳವೆ ಬಾವಿ ಹಳೆಯದಾಗಿದೆ. ಗ್ರಾ.ಪಂ.ನವರು ಪ್ರತಿ ಮನೆಗೆ ₹1500 ವಸೂಲಿ ಮಾಡಿರುವ ಹಣ ಎಲ್ಲಿ ಹೋಯಿತು. ಗ್ರಾ.ಪಂ.ನವರು ಸರಿಯಾಗಿ ಕೆಲಸ ಮಾಡದ ಕಾರಣ ಕೆಲವು ಮನೆಗಳಿಗೆ ಮಾತ್ರ ನೀರು ಸರಬರಾಜು ಆಗುತ್ತಿದೆ. ಉಳಿದ ಮನೆಗಳಿಗೆ ನೀರು ಬರುವುದಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವಿಠಲ್ ರಾವ ಪಾಟೀಲ್ ಬಾಲೂರ ಕಮಲನಗರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕರಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಪಿಎಸ್‍ಐ ಪ್ರದೀಪ ಕೊಳ್ಳ ಅವರಿಗೆ ಮನವಿ ನೀಡಿದರು.

ತಾಲ್ಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಾಣಿಕರಾವ ಪಾಟೀಲ್, ತಾ.ಪಂ.ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಕಮಲನಗರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜಕುಮಾರ್ ತಂಬಾಕೆ, ವೈಜಿನಾಥ ವಡ್ಡೆ, ತಾನಾಜಿ ತೋರಣೆಕರ, ಪ್ರಶಾಂತ ಖಾನಾಪುರೆ, ಕಮಲನಗರ ತಾಲ್ಲೂಕಿನ ರೈತ ಸಂಘದ ಅಧ್ಯಕ್ಷ ಪ್ರವೀಣ ಕುಲಕರ್ಣಿ, ಗೋವಿಂದರಾವ ತಾಂದಳೆ, ಜನಾರ್ಧನ್ ಸಾವರಗೆಕರ್, ಇತರರು ಉಪಸ್ಥಿತರಿದ್ದರು.

ಬಾಲೂರ ಕೆ ಗ್ರಾಮದಲ್ಲಿ 8 ರಿಂದ 10 ಮನೆಗಳಿಗೆ ನೀರು ಸರಬರಾಜು ಆಗುತ್ತಿಲ್ಲ. ಕೆಲವು ಮನೆಗಳು ಎತ್ತರ ಪ್ರದೇಶದಲ್ಲಿವೆ. ತಗ್ಗಿನಲ್ಲಿರುವವರು ನೀರು ಪಡೆದ ತಕ್ಷಣ ನಿಲ್ಲಿಸಬೇಕು. ಆದರೆ ಅವರು ಬೇಕಾಬಿಟ್ಟಿ ಬಿಡುವುದರಿಂದ ನೀರು ಪೋಲಾಗುತ್ತಿದೆ. ಆದ್ದರಿಂದ ಸಮಸ್ಯೆ ಉಂಟಾಗಿದೆ. ನಾವು ಪರಿಶೀಲಿಸಿ ತಕ್ಷಣವೇ ಸರಿಪಡಿಸುತ್ತೆವೆ. ಎಂದು ಕಮಲನಗರ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ರಾಜಕುಮಾರ್ ತಂಬಾಕೆ ಪ್ರಜಾವಾಣಿಗೆ ತಿಳಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *