ಕೀಪ್ಯಾಡ್ ಮೊಬೈಲ್ ಫೋನ್’ಗಳಲ್ಲೂ ಯುಪಿಐ ಪಾವತಿಗೆ ಅವಕಾಶ ! – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್



Promotion

ಬೆಂಗಳೂರು, ಸೆಪ್ಟೆಂಬರ್ 03, 2023 (www.justkannada.in): ಕೀಪ್ಯಾಡ್ ಮೊಬೈಲ್ ಫೋನ್ ಗಳಲ್ಲೂ ಯುಪಿಐ ಪಾವತಿ ಮಾಡುವ ಕಾಲ ಬರಲಿದೆ!

ಹೌದು. ಈ ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಮಾಹಿತಿ ನೀಡಿದ್ದಾರೆ. ಕೀಪ್ಯಾಡ್ ಮೊಬೈಲ್ ಫೋನ್ ಗಳಲ್ಲಿಯೂ ಯುಪಿಐ ಪಾವತಿ ವ್ಯವಸ್ಥೆ ನಿರ್ವಹಿಸುವಂತೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಯುಪಿಐ ಪಾವತಿ ವ್ಯವಸ್ಥೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಯಶಸ್ಸು ಎಂದು ಗುರುತಿಸಲಾಗಿದೆ. ಇದು ಸರ್ಕಾರದ ದೃಢವಾದ ಬೆಂಬಲದೊಂದಿಗೆ ರಿಸರ್ವ್ ಬ್ಯಾಂಕಿನ ಉಪಕ್ರಮಗಳಲ್ಲಿ ಒಂದಾಗಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ನಾವು ಡಿಜಿಟಲ್ ಪಾವತಿಯನ್ನು ಪ್ರೋತ್ಸಾಹಿಸಿದ್ದೇವೆ. ಆದರೆ ಯುಪಿಐನಲ್ಲಿನ ಮುಖ್ಯ ಸವಾಲು ಎಂದರೆ ಅದಕ್ಕೆ ಸಾಮಾನ್ಯವಾಗಿ ಸ್ಮಾರ್ಟ್ಫೋನ್ ಬೇಕು. ಆದರೆ ನಮ್ಮ ದೇಶದಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಕೀಪ್ಯಾಡ್ ಫೋನ್ ಬಳಸುತ್ತಿದ್ದಾರೆ. ಯುಪಿಐ ವ್ಯವಸ್ಥೆಯನ್ನು ನಿರ್ವಹಿಸಲು ಫೀಚರ್ ಫೋನ್ ಗಳನ್ನು ತಯಾರಿಸಲು ನಾವು ಕೆಲವು ಉತ್ಪನ್ನಗಳನ್ನು ಪ್ರಾರಂಭಿಸಿದ್ದೇವೆ ಎಂದಿದ್ದಾರೆ.






Previous article10 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ.


Font Awesome Icons

Leave a Reply

Your email address will not be published. Required fields are marked *