ಕುವೆಂಪು ಅವರ ಕುಪ್ಪಳ್ಳಿಯ ಕವಿಮನೆಗೆ ಭೇಟಿ ನೀಡಿದ ನಟ ಸಾಯಿಕುಮಾರ್

ಬೆಂಗಳೂರು:  ದಕ್ಷಿಣ ಭಾರತದ ಖ್ಯಾತ ನಟ ಸಾಯಿಕುಮಾರ್ ಇತ್ತೀಚಿಗೆ ರಾಷ್ಟ್ರಕವಿ ಕುವೆಂಪು  ಅವರ ಕುಪ್ಪಳ್ಳಿಯ ಕವಿಮನೆ ಹಾಗೂ ಕವಿಶೈಲಕ್ಕೆ  ಭೇಟಿ ನೀಡಿ ತಮ್ಮ ಸುಂದರ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರು ಅವರು ನಾನು ನನ್ನ ಸಿನಿಮಾಗಳಲ್ಲಿ ಕುವೆಂಪು ಅವರ ‘ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’, ‘ಕನ್ನಡಕ್ಕೆ ಹೋರಾಡು ಕನ್ನಡದ ಕಂದ’, ‘ಬಾರಿಸು ಕನ್ನಡ ಡಿಂಡಿಮವ’ ಮುಂತಾದ ಕವನಗಳನ್ನು ಹಾಗೂ ‘ಜಯ ಭಾರತ ಜನನಿಯ ತನುಜಾತೆ’ ನಾಡಗೀತೆಯನ್ನು ಹಾಡುತ್ತಿರುತ್ತೇನೆ. ಆದರೆ ಈವರೆಗೂ ಕುಪ್ಳಳ್ಳಿಗೆ ಹೋಗಿರಲಿಲ್ಲ. ಇತ್ತೀಚಿಗೆ ಕುಪ್ಪಳ್ಳಿಯ ಕವಿಮನೆ ಹಾಗೂ ಕವಿಶೈಲಕ್ಕೆ ಹೋಗಿದ್ದೆ. ಪ್ರಕೃತಿಯ ಮಡಿಲಲ್ಲಿರುವ ಆ ಪುಣ್ಯಸ್ಥಳವನ್ನು ನೋಡಿ ಪುಳಕಿತನಾದೆ. ಅವರು ಬಳಸುತ್ತಿದ್ದ ಲೇಖನಿ ಹಾಗೂ ಪುಸ್ತಕ ಮುಂತಾದವುಗಳನ್ನು ಕಂಡು ಧನ್ಯನಾದೆ’ ಎಂದಿದ್ದಾರೆ.

ನಾನು ಸುಮಾರು ಮೂವತ್ತು ವರ್ಷಗಳಿಂದ ಕರ್ನಾಟಕದಲ್ಲಿ ಕನ್ನಡ ಚಿತ್ರಗಳನ್ನು ಮಾಡುತ್ತಾ ಬಂದಿದ್ದರೂ ಕುಪ್ಪಳ್ಳಿಯನ್ನು ನೋಡುವ ಯೋಗ ಬಂದಿರಲಿಲ್ಲ. ಈಗ ಬಂದು ಅಲ್ಲಿನ ಸೊಬಗನ್ನ ಕಣ್ತುಂಬಿಕೊಂಡೆ ಎನ್ನುತ್ತಾರೆ ನಟ.

 

 

Font Awesome Icons

Leave a Reply

Your email address will not be published. Required fields are marked *