‘ಕೆಜಿಎಫ್​ 3’ ಘೋಷಣೆ; ಆದರೆ ನಿರ್ದೇಶಕ ಪ್ರಶಾಂತ್ ನೀಲ್ ಅಲ್ಲ

ಮುಂಬೈ:  ‘ಕೆಜಿಎಫ್ ಚಾಪ್ಟರ್ 1’ ಹಾಗೂ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾಗಳು ಕನ್ನಡ ಸಿನಿಮಾ ಇತಿಹಾಸದಲ್ಲಿ ಹಲವು ದಾಖಲೆ ಸೃಷ್ಟಿ ಮಾಡಿತ್ತು. ಈ ಚಿತ್ರಕ್ಕೆ ಮೂರನೇ ಪಾರ್ಟ್ ಬರಲಿದೆ ಅನ್ನೋದು ‘ಕೆಜಿಎಫ್ 2’ ಕ್ಲೈಮ್ಯಾಕ್ಸ್​​ನಲ್ಲಿ ರಿವೀಲ್ ಆಗಿತ್ತು. ಆದರೆ, ಇದು ಯಾವಾಗ ಬರಲಿದೆ ಎಂಬ ಬಗ್ಗೆ ನಿರ್ಮಾಣ ಸಂಸ್ಥೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಈಗ ಪ್ರಶಾಂತ್ ನೀಲ್ ಅವರು ಈ ಕುರಿತು ಅಪ್​​ಡೇಟ್ ನೀಡಿದ್ದಾರೆ.

ಹೌದು. . .ಪ್ರಶಾಂತ್ ನೀಲ್​ ನಿರ್ದೇಶನದ, ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಸಿನಿಮಾ ಬಗ್ಗೆ ‘ಪಿಂಕ್​ವಿಲ್ಲಾ’ ಜೊತೆ ಪ್ರಶಾಂತ್ ನೀಲ್ ಮಾತನಾಡಿದ್ದಾರೆ. ಈ ವೇಳೆ ಅವರು ‘ಕೆಜಿಎಫ್ 3’ ವಿಚಾರ ರಿವೀಲ್ ಮಾಡಿದ್ದಾರೆ.

‘ಕೆಜಿಎಫ್​ಗೆ ಮೂರನೇ ಪಾರ್ಟ್​ ಬರ್ತಿದೆ. ನಾನು ಸಿನಿಮಾದ ನಿರ್ದೇಶಕ ಹೌದೋ ಅಲ್ಲವೋ ಅನ್ನೋದು ಗೊತ್ತಿಲ್ಲ’ ಎಂದು ನಕ್ಕಿದ್ದಾರೆ ಪ್ರಶಾಂತ್ ನೀಲ್. ‘ಯಶ್ ಅವರು ಈ ಚಿತ್ರದ ಭಾಗವಾಗಿದ್ದಾರೆ. ನಾವು ಈ ಬಗ್ಗೆ ಘೋಷಣೆ ಮಾಡಿಲ್ಲ. ಸ್ಕ್ರಿಪ್ಟ್​ ರೆಡಿ ಇದೆ. ಘೋಷಣೆ ಮಾಡುವ ಮುನ್ನವೇ ಸ್ಕ್ರಿಪ್ಟ್ ಬಗ್ಗೆ ನಿರ್ಧರಿಸಿದ್ದೆವು.

ಯಶ್ ಅವರು ಸಾಕಷ್ಟು ಜವಾಬ್ದಾರಿಯುತ ವ್ಯಕ್ತಿ. ಕೇವಲ ಕಮರ್ಷಿಯಲ್ ಕಾರಣಕ್ಕೆ ಅವರು ಸಿನಿಮಾ ಮಾಡಲು ಒಪ್ಪುವುದಿಲ್ಲ. ಕೆಜಿಎಫ್​ ಎರಡನೇ ಚಾಪ್ಟರ್ ಕೊನೆಯಲ್ಲಿ ಮುಂದಿನ ಪಾರ್ಟ್ ಬಗ್ಗೆ ಅನೌನ್ಸ್ ಮಾಡುವ ಮೊದಲೇ ಅದನ್ನು ಪೇಪರ್​ನಲ್ಲಿ ಹೊಂದಿದ್ದೆವು’ ಎಂದಿದ್ದಾರೆ ಪ್ರಶಾಂತ್ ನೀಲ್.

Font Awesome Icons

Leave a Reply

Your email address will not be published. Required fields are marked *