ಕೇರಳದಲ್ಲಿ ಆನೆಯ ಕೋಪಕ್ಕೆ ಮಾವುತ ಮೃತ್ಯು

ಕೇರಳ : ಆನೆ ತುಳಿತದಿಂದ ಮಾವುತನೋರ್ವ ಸಾವನ್ನಪ್ಪಿದ ಘಟನೆ ಕೇರಳದ ವೈಕೋಮ್​ನಲ್ಲಿ ನಡೆದಿದೆ.

ಪುತ್ತುಪ್ಪಲ್ಲಿ ಮೂಲದ 26 ವರ್ಷದ ಅರವಿಂದ್​ ಎಂಬಾತ ಸಾವನ್ನಪ್ಪಿದ್ದಾರೆ. ಟಿವಿ ಪುರಂನ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ 9 ಗಂಟೆಗೆ ಆನೆ ಮಾವುತನ ಮೇಲೆ ದಾಳಿ ಮಾಡಿದೆ. ಕುಂಜುಲಕ್ಷ್ಮೀ ಎಂಬ ಆನೆಯು ಅರವಿಂದ್​ನನ್ನು ಸೊಂಡಿಲಿನಲ್ಲಿ ಬಿಸಿ ಬಳಿಕ ಕಾಲಿನಲ್ಲಿ ತುಳಿದು ಹಾಕಿದೆ.

ದೃಶ್ಯದಲ್ಲಿ ಕಂಡುಬಂದಂತೆ ಅರವಿಂದ್ ಆನೆಯ ಕಾಲಿನ ಬಳಿ ಹೋದಾಗ ಕೋಪಗೊಂಡು ದಾಳಿ ಮಾಡಿ, ಸೊಂಡಿನಲ್ಲಿ ಬೀಸಿ ನೆಲಕ್ಕೆ ಬಡಿದಿದೆ. ಈ ವೇಳೆ ಅಲ್ಲೇ ಇದ್ದ ಮತ್ತೋರ್ವ ಮಾವುತ ಅರವಿಂದ್​ನನ್ನು ರಕ್ಷಿಸಲು ಮುಂದಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರು ಅರವಿಂದ್​ ಚಿಕಿತ್ಸೆ ಫಲಿಸದೆ​ ​ಸಾವನ್ನಪ್ಪಿದ್ದಾರೆ.

Font Awesome Icons

Leave a Reply

Your email address will not be published. Required fields are marked *