ಕೇರಳ ʼಧರ್ಮ ಪ್ರಾಂತ್ಯʼ ಚರ್ಚ್‌ಗಳಲ್ಲಿ ʻದಿ ಕೇರಳ ಸ್ಟೋರಿʼ ಪ್ರದರ್ಶನಕ್ಕೆ ನಿರ್ಧಾರ

ಕೇರಳ:   ಕೇರಳ ಸ್ಟೋರಿ ಚಿತ್ರ ಬಿಡುಗಡೆಯಾಗಿ ಬಹಳ ಸಮಯ ಕಳೆದಿದ್ದರು ಅದರ ಚಾಯೆ ಮಾತ್ರ ಇನ್ನು ಇದೆ. ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲಗಲಿ ಬಾರಿ ಸದ್ಧು ಮಾಡಿತ್ತು ಇದೀಗ ಮತ್ತೆ ಕೇರಳದಲ್ಲಿ ಅಲೆ ಬೀಸಿದೆ. ಇದೀಗ ಕೇರಳ ಕ್ಯಾಥೋಲಿಕ್‌ ಯೂತ್‌ಮೆಂಟ್‌ ತನ್ನ ಧರ್ಮ ಪ್ರಾಂತ್ಯದ ಅಡಿಯಲ್ಲಿ ಬರುವ ಚರ್ಚ್‌ಗಳಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶನಕ್ಕೆ ತೀರ್ಮಾನಿಸಿದ್ದು, ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಕೇರಳದ ಆಡಳಿತಾರೂಢ ಎಲ್‌ಡಿಇಇಎಫ್‌ ಹಾಗೂ ಪ್ರತಿಪಕ್ಷ ಯುಡಿಎಫ್‌ ಮೈತ್ರಿ ಕೂಟಗಳು ಈ ವಿಚಾರದಲ್ಲಿ ಇನ್ನು ಕಾಳಗ ಕೊನೆಕೊಂಡಿಲ್ಲ.

ಚರ್ಚ್‌ಗಳಲ್ಲಿ ʻದಿ ಕೇರಳ ಸ್ಟೋರಿʼ ಸಿನಿಮಾ ಪ್ರದರ್ಶನ ಆಗುತ್ತಿರೋದು ಸಹಜವಾಗಿಯೇ ಬಿಜೆಪಿ ನಾಯಕರಿಗೆ ಸಂತಸ ತಂದಿದೆ. ಈ ವಿಚಾರವಾಗಿ ಕೇರಳ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೇರಳ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್‌, ʻದಿ ಕೇರಳ ಸ್ಟೋರಿʼ ಸಿನಿಮಾ ಸತ್ಯ ಘಟನೆಗಳನ್ನು ಆಧರಿಸಿದೆ. ಜನರಿಗೆ ಜಾಗೃತಿ ಮೂಡಿಸುತ್ತಿದೆ. ಆದರೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮಾತ್ರ ಸತ್ಯವನ್ನು ಮುಚ್ಚಿಡುವ ಯತ್ನ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಆದರೆ ಈ ಕುರಿತು ಪಿಣರಾಯಿ ವಿಜಯನ್‌ ತಿರುಗೇಟು ನೀಡಿದ್ದಾರೆ. ಸಂಘ ಪರಿವಾರದ ಅಜೆಂಡಾಗೆ ಬಲಿಯಾಗಬೇಡಿ ಎಂದಿದ್ದಾರೆ. ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿ ಕಟ್ಟಲಾಗುತ್ತಿದೆ.ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳೂ ಒಂದಾಗಿರಬೇಕು. ಆದರೆ, ಸಂಘ ಪರಿವಾರ ಮುಸ್ಲಿಮರನ್ನೇ ಗುರಿಯಾಗಿಸುತ್ತದೆ ಎಂದು ಪಿಣರಾಯಿ ವಿಜಯ್‌ ಹೇಳಿದ್ದಾರೆ.

Font Awesome Icons

Leave a Reply

Your email address will not be published. Required fields are marked *