ಕೈದಿಗಳಿಗೆ ಗಾಂಜಾ, ಮೊಬೈಲ್ ನೀಡಲು ಯತ್ನ: ಇಬ್ಬರ ಬಂಧನ

ಶಿವಮೊಗ್ಗ: ಶಿವಮೊಗ್ಗದ ಸೋಗಾನೆಯಲ್ಲಿರುವ ಸೆಂಟ್ರಲ್ ಜೈಲ್ ಬಳಿ ಕೈದಿಗಳಿಗೆ ಗಾಂಜಾ ಮೊಬೈಲ್ ನೀಡಲು ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.

ಬಂಧಿತರಿಂದ 29 ಗಾಂಜಾ ಪ್ಯಾಕೆಟ್, 1 ಮೊಬೈಲ್, 2 ಚಾರ್ಜರ್​ ವಶಕ್ಕೆ ಪಡೆಯಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಜೈಲು ಸಿಬ್ಬಂದಿ ದೂರು ದಾಖಲಿಸಿದ್ದಾರೆ.

ಜೈಲು ಸಿಬ್ಬಂದಿ ಸಿಸಿಕ್ಯಾಮರಾದಲ್ಲಿ ಆರೋಪಿಗಳ ಚಲನವಲನಗಳನ್ನು ಗಮನಿಸಿ, 2 ಕಿಲೋಮೀಟರ್ ಬೆನ್ನಟ್ಟಿ ಆರೋಪಿಗಳನ್ನು ‌ಹಿಡಿದಿದ್ದಾರೆ.

Font Awesome Icons

Leave a Reply

Your email address will not be published. Required fields are marked *