ಕೊಟ್ಟರೆ ಉಂಟು, ಇಲ್ಲದಿದ್ದರೆ ಇಲ್ಲ; ಸದಾನಂದ ಗೌಡ ಹೀಗ್ಯಾಕೆ ಹೇಳಿದ್ದು?

ಬೆಂಗಳೂರು: ರಾಜಕೀಯ ನಿವೃತ್ತಿ ಘೋಷಣೆ ಬಳಿಕ ಮತ್ತೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಮಾಜಿ ಸಿಎಂ ಡಿ.ವಿ ಸದಾನಂದ ಗೌಡ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಪಕ್ಷ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಬಹಿರಂಗವಾಗಿ ಹೇಳಿದ್ದ ಸದಾನಂದ ಗೌಡರ ನಿವಾಸಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿಪಕ್ಷ ನಾಯಕ ಆರ್.‌ ಅಶೋಕ ಮತ್ತಿತರ ನಾಯಕರು ಭೇಟಿ ನೀಡಿ ಸಮಾಲೋಚಿಸಿದರು.

ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರವನ್ನು ಪುನರ್‌ ಪರೀಶಿಲಿಸಿ, ನೀವು ಸ್ಪರ್ಧಿಸುವುದಿಲ್ಲ ಎಂಬುದೇ ಅಂತಿಮವಾದರೆ ಬೇರೆ ಅಭ್ಯರ್ಥಿಯನ್ನು ನಿಲ್ಲಿಸದರೂ ಸಹಕರಿಸಿ ಎಂದು ಹೇಳಿದ್ದಾರೆ.

ಪಕ್ಷದಲ್ಲಿ ನಾನು ಕೇಳಿ ಪಡೆದಿದ್ದು ಕಡಿಮೆ, ಪಕ್ಷ ಏನು ನಿರ್ಣಯಿಸುತ್ತದೆಯೋ ಅದನ್ನು ಕೇಳೀದ್ದೇನೆ. ನನ್ನ ಕೆಲಸ ಏನಿದ್ದರೂ ಪಕ್ಷವನ್ನು ಸಂಘಟಿಸುವುದು, ಶಕ್ತಿ ತುಂಬುದಷ್ಟೇ. ನಾನೇನಾಗಬೇಕು, ಸ್ಪರ್ಧಿಸಬೇಕೆ? ಬೇಡವೋ? ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನೆಲ್ಲ ಪಕ್ಷ ತೀರ್ಮಾನಿಸುತ್ತದೆ. ಕೊಟ್ಟರೆ ಉಂಟು, ಇಲ್ಲದಿದ್ದರೆ ಇಲ್ಲ. ಚೆನ್ನಾಗಿಲ್ಲದವರೋಂದಿಗೂ ಉತ್ತಮ ಸಂಬಂಧ ಇಟ್ಟಕೊಳ್ಳಲು ಪ್ರಯತ್ನಿಸುವವನು ನಾನು ಎಂದು ಡಿ.ವಿ ಸದಾನಂದ ಗೌಡ ಹೇಳಿದರು.

Font Awesome Icons

Leave a Reply

Your email address will not be published. Required fields are marked *