ಕೊಟ್ಟ ಮಾತು ಉಳಿಸಿಕೊಂಡ ‘ಹನುಮಾನ್’ ಚಿತ್ರತಂಡ

ಬೆಂಗಳೂರು: ರಾಮ ಮಂದಿರ ನಿರ್ಮಾಣಕ್ಕೆ ಕೋಟ್ಯಂತರ ಮಂದಿ ದೇಣಿಗೆ ನೀಡಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿರುವ ‘ಹನುಮಾನ್’ ತಂಡ ಸಿನಿಮಾ ಬಿಡುಗಡೆಗೆ ಮುನ್ನವೇ ರಾಮ ಮಂದಿರಕ್ಕೆ ದೇಣಿಗೆ ನೀಡುವುದಾಗಿ ಘೋಷಿಸಿತ್ತು, ಅಂತೆಯೇ ಚಿತ್ರತಂಡ ದೇಣಿಗೆ ನೀಡಿದೆ.

ಮಾರಾಟವಾಗುವ ಪ್ರತಿ ಟಿಕೆಟ್​ನ ಐದು ರೂಪಾಯಿ ಮೊತ್ತವನ್ನು ರಾಮ ಮಂದಿರಕ್ಕೆ ದೇಣಿಗೆ ನೀಡುವುದಾಗಿ ಚಿತ್ರತಂಡ ಮೊದಲೇ ಘೋಷಿಸಿತ್ತು.

ಅಂತೆಯೇ ಈವರೆಗೆ 53.28 ಲಕ್ಷ ಟಿಕೆಟ್​ಗಳನ್ನು ಚಿತ್ರತಂಡ ಮಾರಾಟ ಮಾಡಿದ್ದು ಪ್ರತಿ ಟಿಕೆಟ್​ಗೆ ಐದು ರೂಪಾಯಿಯಂತೆ 2.66 ಕೋಟಿ ರೂಪಾಯಿ ಮೊತ್ತವನ್ನು ಚಿತ್ರತಂಡ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದೆ.

‘ಹನುಮಾನ್’ ಚಿತ್ರತಂಡ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ 14.85 ಲಕ್ಷ ರೂಪಾಯಿ ಹಣವನ್ನು ಚಿತ್ರತಂಡ ದೇಣಿಗೆ ನೀಡಿತ್ತು.

ಇದು ಪ್ರೀಮಿಯರ್ ಶೋನ ಟಿಕೆಟ್ ಮಾರಾಟದಿಂದ ಒಟ್ಟಾಗಿದ್ದ ಹಣದ ಭಾಗವಾಗಿತ್ತು. ಈಗ ಮತ್ತೆ 2.66 ಕೋಟಿ ರೂಪಾಯಿ ಮೊತ್ತವನ್ನು ದೇಣಿಗೆ ನೀಡಿದೆ. ಆ ಮೂಲಕ ಕೊಟ್ಟ ಮಾತನ್ನು ಚಿತ್ರತಂಡ ಉಳಿಸಿಕೊಂಡಿದೆ.

Font Awesome Icons

Leave a Reply

Your email address will not be published. Required fields are marked *