ಕೊನೆಗೂ ತನ್ನ ಮದುವೆ ಕುರಿತು ಸತ್ಯ ಬಿಚ್ಚಿಟ್ಟ ವರ್ತೂರ್ ಸಂತೋಷ್

ಬೆಂಗಳೂರು: ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಹುಲಿ ಉಗುರು ಪ್ರಕರಣದ ಮೇಲೆ ಈಗಾಗಲೆ ಒಮ್ಮೆ ವರ್ತೂರ್ ಹೊರ ಬಂದು ಜೈಲ್‌ನಲ್ಲಿದ್ದು ಬೇಲ್‌ ಮೇಲೆ ಮತ್ತೊಮ್ಮೆ ಬಿಬಿ ಮನೆಗೆ ಎಂಟ್ರಿ ಕೊಟ್ಟರು. ಈ ನಡುವೆ ವರ್ತೂರ್‌ಗೆ ಮದುವೆ ಆಗಿದೆ ಅನ್ನೋ ವಿಚಾರ ಎಲ್ಲೆಡೆ ಸುದ್ದಿಯಾಗಿತ್ತು. ಇದೀಗ ವರ್ತೂರು ಸಂತೋಷ್​ ದೊಡ್ಮನೆಯಲ್ಲಿ ತಮ್ಮ ಮದುವೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

‘ನಾನು ಮೊದಲೇ ಮನೆಯಲ್ಲಿ ಹಿರಿಯರಿಗೆ ಹೇಳಿದ್ದೆ. ದೊಡ್ಡಪ್ಪ ನೀನು ಒಬ್ಬರನ್ನು ತೋರಿಸಿ ಇಂತಹ ವ್ಯಕ್ತಿಗೆ ತಾಳಿ ಕಟ್ಟು ಅಂತ ಕೇಳಿ ನಾನು ಕಟ್ಟುತ್ತೀನಿ.. ನಾನು ಮಾತು ಕೊಟ್ಟು ಒಪ್ಪಿಕೊಂಡು ಬಿಟ್ಟೆ. ಹಾಗೆ ದಿನ ಸಾಗುತ್ತಾ ಸಾಗುತ್ತಾ ನನ್ನ ತಾಯಿಯನ್ನು ನಿರ್ಲಕ್ಷ್ಯ ಮಾಡಲು ಶುರು ಮಾಡಿದ್ದರು. ನಾನು ಸಂಪಾದನೆ ಮಾಡಿರುವ ಜನರನ್ನು ತೊರೆದು ಹೆಂಡತಿ ಹಿಂದೆ ಹೋಗಬೇಕು ಅಂದ್ರೆ ನನಗೆ ಅದು ಸಾಧ್ಯವಿಲ್ಲ. ಅವರ ತವರು ಮನೆಗೆ ಹೋಗಿ ಬಿಡುತ್ತಾರೆ. ಅಲ್ಲಿ ಹೇಳ್ತೀನಿ…ನನ್ನ ಮಾತಿನ ಪ್ರಕಾರ ನೀನು ಬಂದ್ರೆ ಇವತ್ತಿಗೂ ನೀನು ರಾಣಿನೇ. ಕರೆದ ಮೇಲೆ ಫಸ್ಟ್‌ ನಮ್ಮ ಮನೆಯಿಂದ ಗೇಟ್‌ನಿಂದ ಹೊರ ಹೋಗು ಎನ್ನುತ್ತಾರೆ. ಅವತ್ತು ಮಾತು ಕೊಟ್ಟು ಬಂದಿದ್ದೀನಿ ಇವತ್ತು ಆ ಮಾತುಗಳ ಮೇಲೆ ನಿಂತಿದ್ದೀನಿ’ ಎಂದು ಈಗಷ್ಟೆ ರಿಲೀಸ್ ಆಗಿರುವ ಪ್ರೋಮೋದಲ್ಲಿ ವರ್ತೂರ್ ಮಾತನಾಡಿದ್ದಾರೆ.

ಇನ್ನು ತನಿಷಾ ಜೊತೆ ವರ್ತೂರ್ ಫ್ಲರ್ಟ್ ಮಾಡುತ್ತಿದ್ದಾರೆ ಮದುವೆನೂ ಆಗಬಹುದು ಆದರೆ ಮೊದಲ ಮದುವೆ ಬಗ್ಗೆ ಎಂದೂ ಹೇಳಿಕೊಂಡಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದರು. ಆದರೆ ಮನೆಯಲ್ಲಿದ್ದು ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಸಂದರ್ಶನಗಳಲ್ಲಿ ವರ್ತೂರ್ ಮತ್ತು ತನಿಷಾ ನಡುವೆ ಏನೂ ಇಲ್ಲ ಕೇವಲ ಸ್ನೇಹಿತರು ಎಂದು ಸ್ಪಷ್ಟನೆ ನೀಡುತ್ತಾ ಬಂದಿದ್ದಾರೆ.

Font Awesome Icons

Leave a Reply

Your email address will not be published. Required fields are marked *